Wednesday, 22nd May 2019

Recent News

ಸ್ಯಾಂಡಲ್‍ವುಡ್ ಸ್ಟಾರ್ ನಟನಿಗೆ ಧ್ವನಿಯಾದ ಸಂಜಿತ್ ಹೆಗ್ಡೆ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಶೋ ಮೂಲಕ ಖ್ಯಾತರಾಗಿರುವ ಗಾಯಕ ಸಂಜಿತ್ ಹೆಗ್ಡೆ ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಧ್ವನಿಯಾಗಿದ್ದಾರೆ.

ಸ್ಯಾಂಡಲ್‍ವುಡ್‍ನಲ್ಲಿ ಸಂಜಿತ್ ಹೆಗ್ಡೆ ಒಂದರ ಹಿಂದೆ ಒಂದು ಸೂಪರ್ ಹಿಟ್ ಹಾಡುಗಳನ್ನು ನೀಡುತ್ತಿದ್ದಾರೆ. ಸದ್ಯ ಈಗ ಸಂಜಿತ್, ಪುನೀತ್ ರಾಜ್‍ಕುಮಾರ್ ನಟನೆಯ ‘ನಟಸಾರ್ವಭಮ’ ಚಿತ್ರದ ಇಂಟ್ರೋಡಕ್ಷನ್ ಹಾಡನ್ನು ಹಾಡಿದ್ದಾರೆ.

ಇತ್ತೀಚೆಗೆ ಸಂಜಿತ್ ಹೆಗ್ಡೆ ಲೂಸ್ ಮಾದ ಯೋಗೀಶ್ ಅಭಿನಯಿಸಿದ ‘ಲಂಬೋದರ’ ಚಿತ್ರಕ್ಕೆ ಹಾಡನ್ನು ಹಾಡಿದ್ದರು. ಈ ಚಿತ್ರದ ಆಡಿಯೋವನ್ನು ಪುನೀತ್ ರಾಜ್‍ಕುಮಾರ್ ರಿಲೀಸ್ ಮಾಡಿದ್ದರು. ಸದ್ಯ ಸಂಜಿತ್ ಹಾಡಿಗೆ ಶಿವಣ್ಣ ಹಾಗೂ ಪುನೀತ್ ಇಬ್ಬರು ಫಿದಾ ಆಗಿದ್ದಾರೆ.

ನಟಸಾರ್ವಭೌಮ ಚಿತ್ರದ ಇಂಟ್ರೊಡಕ್ಷನ್ ಹಾಡಿಗೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದು, ಜೊತೆಗೆ ‘ಟಗರು’ ಖ್ಯಾತಿಯ ಆಂಟೋನಿ ದಾಸ್ ಅವರು ಕೂಡ ಈ ಚಿತ್ರಕ್ಕೆ ಹಾಡನ್ನು ಹಾಡಿದ್ದಾರೆ. ಈ ಚಿತ್ರಕ್ಕೆ ಡಿ. ಇಮ್ರಾನ್ ಸಂಗೀತಾ ನೀಡಿದ್ದಾರೆ.

ಈ ಚಿತ್ರದ ಹಾಡಿಗಾಗಿ ಅದ್ಧೂರಿ ಸೆಟ್ ನಿರ್ಮಿಸಿ ಅಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು, ಪವನ್ ಒಡೆಯರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪುನೀತ್‍ಗೆ ನಾಯಕಿಯರಾಗಿ ಡಿಂಪಲ್ ಬೆಡಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *