Connect with us

Bengaluru City

ಬೆಳ್ಳಿಪರದೆಗೆ ಬರಲು ರೆಡಿಯಾಯ್ತು ದಾಸನ ಗರಡಿ ಹುಡ್ಗನ ಸಿನಿಮಾ- ‘ಟಕ್ಕರ್’ ಕೊಡಲು ಮನೋಜ್ ರೆಡಿ..!

Published

on

ಯುವ ನಿರ್ದೇಶಕ ವಿ. ರಘು ಶಾಸ್ತ್ರಿ ‘ಟಕ್ಕರ್’ ಕೊಡೋದಿಕ್ಕೆ ರೆಡಿಯಾಗಿ ನಿಂತಿದ್ದಾರೆ. ಈ ಹಿಂದೆ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಗೆ ‘ರನ್ ಅಂಟೋನಿ’ ಅಂತಾ ಆ್ಯಕ್ಷನ್ ಕಟ್ ಹೇಳಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಅದಕ್ಕೂ ಮೊದಲು ರಘು, ಕನ್ನಡ ಕೆಲ ಸಿನಿಮಾಗಳಿಗೆ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್, ಬಾಲಿವುಡ್ ನ ಅನುರಾಗ್ ಕಶ್ಯಪ್ ಸೇರಿದಂತೆ ಕೆಲ ನಿರ್ದೇಶಕ ಗರಡಿಯಲ್ಲಿ ಪಳಗಿರುವ ಅನುಭವದ ನಿರ್ದೇಶನ ಮಾಡುವ ಸಾಹಸಕ್ಕೆ ಕೈ ಹಾಕಿ, ಯಶಸ್ಸು ಕಂಡಿದ್ದಾರೆ, ಕಾಣುತ್ತಿದ್ದಾರೆ. ರಘು, ರನ್ ಅಂಟೋನಿ ಸಿನಿಮಾಕ್ಕೆ ನಿರ್ದೇಶನದ ಮಾಡುವ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರೀಗೆ ಪಾದಾರ್ಪಣೆ ಮಾಡಿದರು. ಆ ಬಳಿಕ ರಘು ಶಾಸ್ತ್ರಿ ಮನೋಜ್ ನಟನೆಯ ಟಕ್ಕರ್ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.

ದರ್ಶನ್ ಸೋದರಳಿನ ಮನೋಜ್ ಹೀರೋ ಆಗಿ ಕನ್ನಡ ಸಿನಿ ಲೋಕಕ್ಕೆ ಇಂಟ್ರೂಡ್ಯೂಸ್ ಆಗ್ತಿರುವ ಟಕ್ಕರ್ ಸಿನಿಮಾಕ್ಕೆ ರಘು ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್, ಪೋಸ್ಟರ್ ಸಖತ್ ಸದ್ದು, ಸುದ್ದಿ ಮಾಡುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲುಕ್ ಮತ್ತು ಪೋಸ್ಟರ್ ಗಳ ಮೂಲಕ ಮೊದಲ ಸಿನಿಮಾದಲ್ಲೇ ಚಿತ್ರಪ್ರಿಯರ ಗಮನ ಸೆಳೆದಿರುವ ಮನೋಜ್ ‘ಟಕ್ಕರ್’ ಟೀಸರ್ ಭಾರಿ ಕುತೂಹಲ ಮೂಡಿಸಿದೆ.

ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಇಷ್ಟರಲ್ಲಿ ಮನೋಜ್ ತೆರೆಮೇಲೆ ಟಕ್ಕರ್ ತೋರಿಸಬೇಕಿತ್ತು. ಆದರೆ ಕೊರೊನಾ ಎಲ್ಲದಕ್ಕೂ ಬ್ರೇಕ್ ಆಗಿದ್ದು, ಇದೀಗ ಸಿನಿಮಾ ತಂಡ ಟಕ್ಕರ್ ಸಿನಿಮಾ ರಿಲೀಸ್ ಮಾಡೋದಿಕ್ಕೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಮಾರ್ಚ್ ಇಲ್ಲ ಏಪ್ರಿಲ್ ಮೇಲೆ ಟಕ್ಕರ್ ಸಿನಿಮಾ ಅಬ್ಬರಿಸುವುದು ಪಕ್ಕ ಅಂತ ನಿರ್ದೇಶಕ ರಘು ಶಾಸ್ತ್ರಿ ಹೇಳಿದ್ದಾರೆ.

ಟಕ್ಕರ್ ಹೆಸರೇ ಹೇಳುವಂತೆ ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸೈಬರ್ ಕ್ರೈಮ್ ಆಧಾರಿತ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಈಗಾಗಲೇ ಮೂರು ಹಂತದಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಬೆಂಗಳೂರು, ಮೈಸೂರು ಹಾಗೂ ಮಲೇಷಿಯಾದಲ್ಲಿ ಅದ್ಭುತ ತಾಣಗಳಲ್ಲಿ ಸುಂದರ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

ಎಸ್.ಎಲ್.ಎನ್ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾಗಿರುವ ಈ ಸಿನಿಮಾಕ್ಕೆ, ಈ ಹಿಂದೆ ‘ಹುಲಿರಾಯ’ ಚಿತ್ರವನ್ನು ನಿರ್ಮಾಣ ಮಾಡಿದ್ದ ನಾಗೇಶ್ ಕೋಗಿಲು ‘ಟಕ್ಕರ್’ ಚಿತ್ರಕ್ಕೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಮನೋಜ್ ಗೆ ಜೋಡಿಯಾಗಿ ಕನ್ನಡತಿ ಸೀರಿಯಲ್ ನ ಭುವಿ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲ, ಜೈಜಗದೀಶ್ ಸೇರಿದಂತೆ ದೊಡ್ಡ ತಾರಾಗಣ ಸಿನಿಮಾದಲ್ಲಿದೆ. ಮಣಿಕಾಂತ್ ಕದ್ರಿ ಸಂಗೀತ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿಲಿಯಮ್ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

ಸೆನ್ಸಾರ್ ಮುಗಿಸಿ ತೆರೆಗೆ ಬರಲು ರೆಡಿಯಾಗಿರುವ ಟಕ್ಕರ್ ಸಿನಿಮಾದ ಟ್ರೇಲರನ್ನು ಡಿಬಾಸ್ ದರ್ಶನ್ ಕೈಯಲ್ಲಿ ಲಾಂಚ್ ಮಾಡಲು ಸಿನಿಮಾ ಟೀಂ ಯೋಜನೆ ಮಾಡಿದೆಯಂತೆ. ಸದ್ಯದಲ್ಲಿಯೇ ಟ್ರೇಲರ್ ನಿಮ್ಮ ಮುಂದೆ ಬರಲಿದ್ದು, ದಾಸನ ಗರಡಿ ಹುಡ್ಗ ಮನೋಜ್ ಹೊಸ ಅವತಾರ ನೋಡೋದಿಕ್ಕೆ ರೆಡಿಯಾಗಿದೆ. ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನಕ್ಕಿಳಿದ ರಘು ಶಾಸ್ತ್ರಿ, ಎರಡನೇ ಸಿನಿಮಾ ದರ್ಶನ್ ಸೋದರಳಿಯ ಮನೋಜ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ವಿಶೇಷ.

Click to comment

Leave a Reply

Your email address will not be published. Required fields are marked *