Connect with us

Bengaluru City

ರಾಕಿಂಗ್ ಸ್ಟಾರ್‌ನನ್ನು ಹಾಡಿ ಹೊಗಳಿದ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್!

Published

on

ಡೀ ಚಿತ್ರರಂಗದ ಇತಿಹಾಸದಲ್ಲೇ ಧೂಳೆಬ್ಬಿಸಿದ ಸಿನಿಮಾ ಅಂದ್ರೆ ಅದು ಕೆಜಿಎಫ್. ಈ ಚಿತ್ರದಲ್ಲಿ ಚಂದನವನದ ನಟ ಯಶ್ ತಮ್ಮ ನಟನೆ ಹಾಗೂ ಸ್ಟೈಲಿಶ್ ಲುಕ್ ನಿಂದಲೇ ಸಿನಿರಸಿಕರನ್ನು ಬೆರಗುಗೊಳಿಸಿದ್ದರು. ಇದೀಗ ರಾಕಿಂಗ್ ಸ್ಟಾರ್ ಅವರನ್ನು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಒಬ್ಬರು ಹಾಡಿಹೊಗಳಿದ್ದಾರೆ.

ಹೌದು. ಆಲಿಮ್ ಹಕೀಮ್ ಎಂಬವರು ತಮ್ಮ ಸೋಶಿಯಾಲ್ ಮೀಡಿಯಾ ಖಾತೆಯಲ್ಲಿ ಯಶ್ ಜೊತೆಗಿನ ಫೋಟೋ ಹಾಕಿಕೊಂಡು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಯಶ್, ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ, ಒಂದೇ ನೋಟದಲ್ಲಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆಲ್ಲುವಂತಿದೆ.

”ಯಶ್ ಅವರನ್ನು ಹಲವು ವರ್ಷಗಳಿಂದ ತಿಳಿದಿರುವಿರಿ. ಈಗಲೂ ಅವರು ಅದೇ ಅತ್ಯಂತ ವಿನಮ್ರ ಹಾಗೂ ಸಿಂಪಲ್ ವ್ಯಕ್ತಿಯಾಗಿಯೇ ಇದ್ದಾರೆ. ಅವರು ಇತರರಿಗೆ ಹೇಗೆ ಸಹಾಯ ಮಾಡಬೇಕು ಹಾಗೂ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಅತ್ಯುತ್ತಮವಾದುದನ್ನು ನೀಡಬೇಕು ಎಂಬುದನ್ನೇ ಸದಾ ಯೋಚಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿ ನಿಸ್ವಾರ್ಥ ಮನೋಭಾವ ಹೊಂದಿರುವವರನ್ನು ನೋಡುವುದು ತುಂಬಾನೇ ಅಪರೂಪ. ಹೀಗಾಗಿ ಯಶ್ ಒಬ್ಬ ಅದ್ಭುತ ವ್ಯಕ್ತಿಯಾಗಿದ್ದು, ಜೊತೆಗಿದ್ದರೆ ಇನ್ನೂ ಹೆಚ್ಚಿನದ್ದನ್ನು ಕಲಿಯಬಹುದು. ಇದು ಅವರ ಪಾಸಿಟಿವ್ ಶಕ್ತಿಯಾಗಿದ್ದು, ಯಶಸ್ಸನ್ನು ತಂದು ಕೊಟ್ಟಿದೆ. ನಿಜವಾಗಲೂ ಇವರು ಸೂಪರ್ ಸ್ಟಾರ್” ಎಂದು ಹಕೀಮ್ ಬರೆದುಕೊಂಡಿದ್ದಾರೆ.

 

View this post on Instagram

 

A post shared by Aalim Hakim (@aalimhakim)

ಒಟ್ಟಿನಲ್ಲಿ ನಟನೆ ಮಾತ್ರವಲ್ಲದೆ ಜೊತೆಗೆ ಕೃಷಿಯಲ್ಲಿಯೂ ಆಸಕ್ತಿ ತೋರಿರುವ ಯಶ್, ಸದ್ಯ ಹಾಸನದ ತಿಮ್ಮಾಪುರ ಬಳಿಯಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *