ಉತ್ತರಕಾಂಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳುವ ಮೂಲಕ ಮೊನ್ನೆಯಷ್ಟೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದ ಸ್ಯಾಂಡಲ್ ವುಡ್ ಕ್ವೀನ್, ಇದೀಗ ಮತ್ತೊಂದು ಅಚ್ಚರಿ ಸುದ್ದಿ ನೀಡಿದ್ದಾರೆ. ಧನುಷ್ (Dhanush) ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ರಮ್ಯಾ (Ramya) ಹಂಚಿಕೊಂಡಿರುವ ಫೋಟೋಗೂ ಧನುಷ್ ಕೂಡ ಪ್ರತಿಕ್ರಿಯೆ ನೀಡಿರುವುದು ಮತ್ತೊಂದು ವಿಶೇಷ.
ಹದಿನೈದು ವರ್ಷಗಳ ಹಿಂದೆ ಧನುಷ್ ಜೊತೆ ಪೊಲ್ಲಾಧವನ್ ಸಿನಿಮಾ ಮಾಡಿದ್ದಾರೆ ರಮ್ಯಾ. ಈ ಸಿನಿಮಾಗೆ 15 ವರ್ಷಗಳ ಆದ ಹಿನ್ನೆಲೆಯಲ್ಲಿ ಮತ್ತೆ ಸಿನಿಮಾ ಟೀಮ್ ಸೇರಿದೆ. ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಆ ಫೋಟೋಗಳನ್ನು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಆ ದಿನಗಳಲ್ಲಿ ರಮ್ಯಾ ಹೇಗಿದ್ದರು ಎನ್ನುವ ಕುರಿತಾಗಿಯೂ ಹಲವು ಸಂಗತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ
ಪೊಲ್ಲಾಧವನ್ (Polladhavan ನೆನಪಿನಲ್ಲಿ ನಾನು ಹಲವು ವರ್ಷಗಳ ಗೆಳೆಯನನ್ನು ಭೇಟಿಯಾದೆ. ಅಲ್ಲದೇ, ನಾನು ಮೆಚ್ಚುವ ಪ್ರತಿಭಾವಂತ ನಿರ್ದೇಶಕರನ್ನೂ ಭೇಟಿಯಾಗಿದ್ದು ಖುಷಿ ತಂದಿತು. ಈ ಟೀಮ್ ನಿಂದ ನಾನು ಸಾಕಷ್ಟು ಕಲಿತಿದ್ದೇನೆ. ಈ ಸಿನಿಮಾ ನನಗೆ ತುಂಬಾ ಒಳ್ಳೊಳ್ಳೆ ವಿಷಯಗಳನ್ನು ಕಲಿಸಿದೆ. ಮತ್ತೊಂದು ವಿಷಯ ಹೇಳುವುದೆಂದರೆ, ನಾನು ಪೊಲ್ಲಾಧವನ್ 2 ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದು ರಮ್ಯಾ ಬರೆದುಕೊಂಡಿದ್ದಾರೆ.