Connect with us

Cinema

ಫೇಸ್‍ಬುಕ್‍ಗೆ ಎಂಟ್ರಿಕೊಟ್ಟ ಕಿಚ್ಚ ಸುದೀಪ್

Published

on

ಬೆಂಗಳೂರು: ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್ ಬಳಿಕ ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಫೇಸ್‍ಬುಕ್‍ಗೆ ಎಂಟ್ರಿಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಸುದೀಪ್ ತಮ್ಮ ಸಿನಿಮಾ, ಸಾಮಾಜಿಕ ಕಾರ್ಯ ಮತ್ತು ಕೆಲವು ವಿಚಾರಗಳ ಕುರಿತಾಗಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕವಾಗಿ ನಿರಂತರ ಸಂಪರ್ಕದಲ್ಲಿರುತ್ತಾರೆ.

ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್‍ಗಳಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಕಿಚ್ಚ ಸುದೀಪ್ ಅವರು ಸದ್ಯ ಫೇಸ್‍ಬುಕ್‍ಗೆ ಎಂಟ್ರಿಕೊಟ್ಟಿದ್ದಾರೆ. ಈ ಮೊದಲು ಖಾತೆ ಇತ್ತು, ಆದರೆ ಹೆಚ್ಚು ಸಕ್ರಿಯರಾಗಿರಲಿಲ್ಲ. ಆದರೆ ಇತ್ತೀಚೆಗೆ ಅವರ ಸಿನಿಮಾದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕವಾಗಿ ಮತ್ತೆ ಫೇಸ್‍ಬುಕ್ ಖಾತೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್‍ನಲ್ಲಿ ಸಕ್ರೀಯರಾಗಿರುವ ಸುದೀಪ್, ಅವರ ಹೆಸರಿನಲ್ಲಿ ಫೇಸ್‍ಬುಕ್ ಖಾತೆ ತೆರೆದಿದ್ದಾರೆ. ಫೇಸ್‍ಬುಕ್‍ಗೆ ಕಿಚ್ಚ ಬಂದಿರುವುದು ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಲೈಕ್ ಮತ್ತು ಫಾಲೋ ಮಾಡಲು ಆರಂಭಿಸಿದ್ದಾರೆ. ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಕಿಚ್ಚ ಅವರು ಫೇಸ್‍ಬುಕ್ ಮೂಲಕವಾಗಿಯೂ ಅಭಿಮಾನಿಗಳಿಗೆ ಸಿಗಲಿದ್ದಾರೆ.

Dedicated to everyone responsible for Vikrant Rona’s journey to the Burj Khalifa — https://bit.ly/3jCTrC9 | A big…

Posted by Kichcha Sudeep on Monday, 8 February 2021

 

ವಿಕ್ರಾಂತ ರೋಣ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಸ್ಯಾಂಡಲ್ ವುಡ್‍ನಲ್ಲಿ ಬಹುನೀರಿಕ್ಷೆಯ ಚಿತ್ರ ಇದಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಬಂದು 25 ವರ್ಷಗಳಾಗಿದೆ. ಈ ಸಂಭ್ರಮವನ್ನು ಆಚರಿಸಿದ್ದಾರೆ.

Click to comment

Leave a Reply

Your email address will not be published. Required fields are marked *