Connect with us

Cinema

ಡಿಸೆಂಬರ್‌ನಲ್ಲಿ ಅಸುರ ಸಂಹಾರ ಚಿತ್ರ ಬಿಡುಗಡೆ

Published

on

ಶ್ರೀ ಚಂಡಿಕೇಶ್ವರಿ ಕ್ರಿಯೇಶನ್ಸ್ ಲಾಂಛನದಲ್ಲಿ ಹರಿಪ್ರಸಾದ್ ಆರ್.ಸಿ. ನಿರ್ಮಿಸುತ್ತಿರುವ ಅಸುರ ಸಂಹಾರ ಚಿತ್ರವನ್ನು ಕಳೆದ ವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಸರ್ಟಿಫಿಕೇಟ್ ನೀಡಿದೆ. ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಅತ್ಯಾಚಾರ, ದೌರ್ಜನ್ಯ, ಕೊಲೆ ಸುಲಿಗೆಯಂತಹ ಕೃತ್ಯಗಳಿಗೆ ಕಾನೂನಿನಡಿ ಅತಿ ಕಠಿಣವಾದ ಶಿಕ್ಷೆ ವಿಧಿಸಿದರೆ ಇಂಥ ಕ್ರೂರ ಪ್ರಕರಣಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎನ್ನುವ ಮೆಸೇಜ್ ಇರುವ ಚಿತ್ರದ ಇದಾಗಿದೆ. ಈ ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಂಡಿದೆ. ಈ ಚಿತ್ರವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಪ್ರದೀಪ್ ಅರಸು ಕತೆ, ಚಿತ್ರಕತೆ ರಚಿಸಿ, ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಲೋಕಿ ಸಂಗೀತ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ, ವಿನಯ್ ಕುಮಾರ್ ಕೂರ್ಗ್ ಸಂಕಲನ, ಸಂತೋಷ್ ನಾಯಕ್, ಪ್ರದೀಪ್ ಲೋಕಿ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಸ್ಟಾರ್ ಗಿರಿ ನೃತ್ಯ ನಿರ್ದೇಶನವಿದೆ.

ಈ ಚಿತ್ರಕ್ಕೆ ಡಿ ಬ್ರದರ್ಸ್ ಸಹ ನಿರ್ಮಾಪಕರಾಗಿದ್ದಾರೆ. ಹರ್ಷ ಅರಸು, ಹರ್ಷಲ ಹನಿ, ಧರ್ಮ, ರವಿ ಚಂದ್ರ (ಟಾಮಿ), ವೀಣಾ ಸುಂದರ್, ಶಿವು ಬಾಲಾಜಿ, ಅಶ್ವಿನ್, ಹರಿಬ್ರಹ್ಮ, ದೀಕ್ಷಾ ಶೆಟ್ಟಿ, ವಿನಯ್ ಸಂಖ್ಯಾತ್, ನವೀನ್, ನ್ಯೂಸ್ ಪ್ರಕಾಶ್, ರವಿ ಶಿಕಾರಿಪುರ ಇನ್ನು ಮುಂತಾದವರ ತಾರಾಬಳಗವಿದೆ.