Tuesday, 21st January 2020

Recent News

ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

ಬೆಂಗಳೂರು: ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಓಂಸಾಯಿಪ್ರಕಾಶ್ ಪಕ್ಕಾ ಆ್ಯಕ್ಷನ್, ಲವ್ ಸ್ಟೋರಿ ಇಟ್ಟುಕೊಂಡು ಮಾಡಿರುವ ಚಿತ್ರ ಜಗ್ಗಿ ಜಗನ್ನಾಥ್. ಈ ಚಿತ್ರದ ಟ್ರೈಲರ್ ಹೊರಬಂದಿದ್ದು, ಎಲ್ಲಾ ಕಡೆ ಸಖತ್ ವೈರಲ್ ಆಗಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್, ನಿರ್ದೇಶಕ ಸಾಯಿಪ್ರಕಾಶ್, ಯುವಪ್ರತಿಭೆ ಲಿಖಿತ್ ರಾಜ್ ಈ ಮೂವರ ಕಾಂಬಿನೇಶನ್‍ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೈಲರ್ ಯುಟ್ಯೂಬ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಅಗ್ನಿ ಐಪಿಎಸ್, ಪೊಲೀಸ್ ಸ್ಟೋರಿಯಂಥ ಮಾಸ್ ಡೈಲಾಗ್‍ಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಲಿಖಿತ್ ರಾಜ್ ಹಾಗೂ ಸಾಯಿಪ್ರಕಾಶ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ ಡೈಲಾಗ್‍ಗಳು ಪ್ರೇಕ್ಷಕರ ಮನಗೆದ್ದಿವೆ. ಅಂಡರ್‍ವಲ್ರ್ಡ್ ಕಥೆ ಇದಾಗಿದ್ದರೂ ಚಿತ್ರದಲ್ಲಿರುವ ಹೃದಯ ಕಲಕುವ ತಾಯಿ-ಮಗನ ಸೆಂಟಿಮೆಂಟ್ ಸೀನ್‍ಗಳು ಕೂಡ ಗಮನ ಸೆಳೆದಿವೆ. ಈಗಾಗಲೇ ಜಗ್ಗಿ ಜಗನ್ನಾಥ್ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಕ್ತಾಯಗೊಂಡು ಇತ್ತೀಚೆಗಷ್ಟೇ ಚಿತ್ರ ಸೆನ್ಸಾರ್ ಕೂಡ ಆಗಿದೆ. ಒಬ್ಬ ಸಾಮಾನ್ಯ ಯುವಕ ಹೇಗೆ ಅಘೋರಿಯಾದ ಎನ್ನುವ ಕುತೂಹಲಕರವಾದ ಕಥಾಹಂದರ ಚಿತ್ರದಲ್ಲಿದ್ದು, ಇದೇ ಥರದ ಹಲವಾರು ವಿಶೇಷತೆಗಳು ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿವೆ.

ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು, ಜಿ.ಶಾರದ,ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಂ.ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ್‍ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ., ಸಾಯಿಸರ್ವೇಶ್ ಸಾಹಿತ್ಯ, ಶ್ರೀನಿವಾಸ್ ಪಿ. ಬಾಬು ಸಂಕಲನ, ಅರವಿಂದ್ ಡಿಸ್ಕೊ ಡಿಸಿಲ್ವ ನೃತ್ಯ ನಿರ್ದೇಶನ, ಜಾನಿ ಮಾಸ್ಟರ್, ಕೌರವ ವೆಂಕಟೇಶ್ ಸಾಹಸವಿದೆ.

ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿಕುಮಾರ್, ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್ (ಮಜಾ ಟಾಕೀಸ್), ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಮುಂತಾದವರ ತಾರಾಬಳಗವಿದೆ.

Leave a Reply

Your email address will not be published. Required fields are marked *