Connect with us

Bengaluru City

ಡ್ರಗ್ ಮಾಫಿಯಾ- ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ

Published

on

-ತೆವಲಿಗೆ ಬಂದ ಕಲಾವಿದರು ಡ್ರಗ್ ಮಾಫಿಯಾದಲ್ಲಿ ಇರಬಹುದು

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯ ಕುರಿತು ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಧ್ಯಮಗಳಲ್ಲಿ ಕಳೆದ ಕೆಲ ದಿನಗಳಿಂದ ಸ್ಯಾಂಡಲ್‍ವುಡ್ ನಲ್ಲಿ ಡ್ರಗ್ ಮಾಫಿಯಾ ಸುದ್ದಿ ನೋಡಿ ಮನಸ್ಸಿಗೆ ನೋವಾಗಿದೆ. ಇನ್ನು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆರೋಪಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂದ್ರು.

ಮಾಧ್ಯಮಗಳಲ್ಲಿ ಬರ್ತಿರುವ ಡ್ರಗ್ಸ್ ದಂಧೆಯ ಬಗ್ಗೆ ಚರ್ಚೆ ಮಾಡಲಾಗುವುದು. ಮಾಧ್ಯಮಗಳಿಂದ ಒಂದಿಷ್ಟು ಮಾಹಿತಿ ಕೂಡ ಪಡೆಯಬೇಕಿದೆ. ಕೆಲವು ಅಂಶಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆಯಲಾಗಿದೆ. ಸುಮಾರು 6 ತಿಂಗಳಿಂದ ಉಸಿರು ಗಟ್ಟಿಸುವ ವಾತಾವರಣದಲ್ಲಿ ಚಿತ್ರರಂಗ ಇದೆ. ಇದರ ಜೊತೆಗೆ ಈಗ ಡ್ರಗ್ಸ್ ಚರ್ಚೆ ಶುರುವಾಗಿರುವುದು ತುಂಬಾ ಬೇಸರವಾಗಿದೆ. ಯಾವುದೇ ಕಂಪ್ಲೇಟ್ ಬಂದಾಗ ಅದರ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡುತ್ತೇವೆ ಎಂದು ಜೈರಾಜ್ ಹೇಳಿದ್ರು.

ಇದೇ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ, ಯಾವುದೇ ಕಂಪ್ಲೇಟ್ ಬಂದಾಗ ಅದರ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡಲಾಗುತ್ತದೆ. ತೆವಲಿಗೆ ಬಂದಂತ ಕೆಲವು ಕಲಾವಿದರು ಈ ಡ್ರಗ್ಸ್ ಮಾಫಿಯಾದಲ್ಲಿ ಇರಬಹುದು. ನಾನು 40 ವರ್ಷದಿಂದ ನಾನು ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂದ್ರಜಿತ್ ಲಂಕೇಶ್ ಹೇಳಿಕೆ ಕೇಳಿ ನಮಗೆ ಶಾಕ್ ಆಯ್ತು. ಇಂದ್ರಜಿತ್ ಲಂಕೇಶ್ ಆರೋಪ ಸಾಬೀತು ಮಾಡದಿದ್ರೆ ಅವರು ಆರೋಪಿಯ ಸ್ಥಾನದಲ್ಲಿ ನಿಲ್ಲುತ್ತಾರೆ. ಇಲ್ಲದೇ ಇದ್ರೆ ಕೋರ್ಟ್ ಇಂದ್ರಜಿತ್ ಅವರಿಗೂ ಛೀಮಾರಿ ಹಾಕಬಹುದು ಎಂದು ಟಾಂಗ್ ನೀಡಿದರು.

ಪ್ರಶಾಂತ್ ಸಂಬರ್ಗಿಯವರು ಚಿತ್ರದೋಮ್ಯದವರ ಅಲ್ಲ. ಯಾವುದೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿಲ್ಲ. ಸಾಮಾಜಿಕ ಕಳಕಳಿಯಿಂದಾಗಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಚಿತ್ರರಂಗಕ್ಕೂಪ್ರಶಾಂತ್ ಸಂಬರ್ಗಿಯವರಿಗೆ ಯಾವುದೇ ಸಂಬಂಧವಿಲ್ಲ. ಇಂದ್ರಜಿಯ್ ಲಂಕೇಶ್ ನಮ್ಮ ಬಳಿ ಬರದೇ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದಾರೆ. ಹಾಗಾಗಿ ಇಂದ್ರಜಿತ್ ಅವರನ್ನ ಫಿಲಂ ಚೇಂಬರ್ ಗೆ ಕರೆಸಲ್ಲ. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಯಾವುದೇ ಕ್ರಮಕೈಗೊಳ್ಳಲ್ಲ ಎಂದು ಸಾ.ರಾ.ಗೋವಿಂದ ಹೇಳಿದರು.

Click to comment

Leave a Reply

Your email address will not be published. Required fields are marked *