Connect with us

Bengaluru City

ಸುಪ್ರೀಂ ಹೀರೋ ಪುತ್ರನಿಗೆ ಒಲಿದು ಬಂದ ಅದೃಷ್ಟ – ಬಿಗ್ ಬಜೆಟ್ ಸಿನಿಮಾದಲ್ಲಿ ಅಕ್ಷಿತ್ ಶಶಿಕುಮಾರ್!

Published

on

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಚಂದನವನಕ್ಕೆ ಎಂಟ್ರಿ ಕೊಟ್ಟಿರೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಸೀತಾಯಣ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿರುವ ಅಕ್ಷಿತ್ ಗೆ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ಸಿನಿಮಾ ಆಫರ್ ಗಳು ಅರಸಿ ಬರುತ್ತಿವೆ. ಇದೀಗ ಅಕ್ಷಿತ್ ಶಶಿಕುಮಾರ್ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಸಹಿ ಹಾಕಿದ್ದು, ಚಿತ್ರದ ಅದ್ಧೂರಿ ಫೋಟೋ ಶೂಟ್‍ನಲ್ಲೂ ಭಾಗಿಯಾಗಿದ್ದಾರೆ.

ಹೌದು, ಬಳ್ಳಾರಿ ದರ್ಬಾರ್ ಸಿನಿಮಾ ಖ್ಯಾತಿಯ ನಿರ್ದೇಶಕ ಸ್ಮೈಲ್ ಶ್ರೀನು ನಿರ್ದೇಶನದ `ಓ ಮೈ ಲವ್’ ಸಿನಿಮಾದಲ್ಲಿ ಅಕ್ಷಿತ್ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಅದ್ಧೂರಿ ಫೋಟೋ ಶೂಟ್ ಕೂಡ ನಡೆಯುತ್ತಿದ್ದು, ಅಕ್ಷಿತ್ ಶಶಿಕುಮಾರ್ ಜೋಡಿಯಾಗಿ ನಟಿ ಕೀರ್ತಿ ಕಲಕೇರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಹದಿ ಹರೆಹಯದ ವಯಸ್ಸಿನ ಯುವಕ-ಯುವತಿಯರ ಪ್ರೀತಿ ಪುರಾಣ, ತಳಮಳಗಳನ್ನು ಓ ಮೈ ಲವ್ ಸಿನಿಮಾ ಹೇಳ ಹೊರಟಿದ್ದು, ಫ್ಯಾಮಿಲಿ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿದೆ. ನಿರ್ದೇಶಕ ಸ್ಮೈಲ್ ಶ್ರೀನು ರೆಗ್ಯೂಲರ್ ಜಾನರ್ ಹೊರತುಪಡಿಸಿ ಡಿಫ್ರೆಂಟ್ ಆದ ನಿರೂಪಣೆ ಮೂಲಕ ‘ಓ ಮೈ ಲವ್’ ಸಿನಿಮಾ ಕಟ್ಟಿಕೊಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ತಯಾರಾಗಲಿದ್ದು, ಮೇಕಿಂಗ್, ಸಾಂಗ್ಸ್, ಸ್ಟಾರ್ ಕಾಸ್ಟ್ ಎಲ್ಲದರಲ್ಲೂ ಸಿನಿಮಾ ಅದ್ಧೂರಿತನ ಮೇರೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಸಿನಿಮಾ ನಿರ್ಮಾಣವಾಗುತ್ತಿದ್ದು, ಜಿಸಿಬಿ ರಾಮಾಂಜಿನಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಚರಣ್ ಅರ್ಜುನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಹೈದ್ರಾಬಾದ್ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ‘ಓ ಮೈ ಲವ್’ ಸಿನಿಮಾ ಚಿತ್ರೀಕರಣ ನಡೆಯಲಿದೆ.

Click to comment

Leave a Reply

Your email address will not be published. Required fields are marked *

www.publictv.in