Connect with us

Bengaluru City

ಸಾವಿನ ದವಡೆಗೆ ನೂಕುವ ಕ್ರಿಮಿಯು ಬದುಕಿನ ಮಹತ್ವ ತಿಳಿಸುತ್ತದೆ: ಚೈತ್ರಾ ಕೊಟ್ಟೂರು

Published

on

ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಭಾರೀ ಸುದ್ದಿಯಾಗಿದ್ದ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ, ಚೈತ್ರಾ ಕೊಟ್ಟೂರು ಇದೀಗ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು. ಫೇಸ್ ಬುಕ್ ನಲ್ಲಿ ಹೊಸ ಪ್ರೊಫೈಲ್ ಫೋಟೋ ಅಪ್ಲೋಡ್ ಮಾಡಿರುವ ಚೈತ್ರಾ, ‘ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ ಕ್ರಿಮಿಯು, ಬದುಕಿನ ಮಹತ್ವವನ್ನೂ ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಆಭಾರಿ…’ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್‍ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ…

Posted by Chaithra Kotoor on Sunday, April 18, 2021

ಒಟ್ಟಿನಲ್ಲಿ ಕೆಲ ದಿನಗಳ ಹಿಂದೆ ಮದುವೆಯಾಗಿ ಅದೇ ದಿನ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದುಕೊಂಡರು. ಈ ಎಲ್ಲಾ ಕಾರಣಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ಚೈತ್ರಾ ಇದೀಗ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ.

ಸೋಶಿಯಲ್ ಮಿಡಿಯಾಕ್ಕೆ ಎಂಟ್ರಿ ಕೊಟ್ಟು ಪೋಸ್ಟ್ ಹಾಕುತ್ತಿದ್ದಂತೆಯೇ ಮೆಚ್ಚುಗೆಯ ಕಾಮೆಂಟ್ ಗಳೇ ಬರಲಾರಂಭಿಸಿವೆ. ಫೇಸ್ ಬುಕ್ ಬಳಕೆದಾರರೊಬ್ಬರು ‘ಚೈತ್ರಾ ಅಂದ್ರೆ ಹೀಗಿರ್ಬೆಕು ಹೀಗೆ ಗಟ್ಟಿಯಾಗಿ ಖುಷಿಯನ್ನೇ ನಿರಂತರ ಹುಡುಕಿ… ಹೊಸ ಕನಸು ಮತ್ತು ಯೋಜನೆಗಳನ್ನು ಇಟ್ಟುಕೊಂಡು ಮುನ್ನೆಡೆಯಿರಿ. ನಿಮ್ಮಲ್ಲಿಯ ಅಪಾರ ಶಕ್ತಿಯ ಮೇಲೆ ನಂಬಿಕೆ ಇರಲಿ… ನೀವು ಆರೋಗ್ಯವಾಗಿರುವುದು ಕೇಳಿ ಸಂತೋಷವಾಯಿತು. ನಿಲುವು ಬೇರೆಯಾದರು ಬದುಕ ಒಲುಮೆ ಒಂದೆಯಲ್ಲವೇ.? ದೇವರ ಆಶೀರ್ವಾದವಿರಲಿ. ನೋವು ನಲಿವು ಯಾವುದು ಶಾಶ್ವತವಲ್ಲ ಅಂದುಕೊಂಡಂಗೆ ಒಂದೂ ನಡೆಯಲ್ಲ. ಆದ್ರೂ ನಗ್ ನಗ್ತಾ ಬಾಳಬೇಕು. ಒಳ್ಳೆ ಕಾಲಕ್ಕಾಗಿ ಕಾಯ್ಬೇಕು…’ ಎಂದು ಬರೆದುಕೊಂಡಿದ್ದಾರೆ. ಹೀಗೆ ಸಾಕಷ್ಟು ಕಾಂಮೆಂಟ್ ಗಳು ಬಂದಿವೆ.

Click to comment

Leave a Reply

Your email address will not be published. Required fields are marked *