Connect with us

ವರದನಾಯಕ ಸಿನಿಮಾ ನಟಿ ಸಮೀರಾ ರೆಡ್ಡಿಗೆ ಕೊರೊನಾ

ವರದನಾಯಕ ಸಿನಿಮಾ ನಟಿ ಸಮೀರಾ ರೆಡ್ಡಿಗೆ ಕೊರೊನಾ

ಬೆಂಗಳೂರು: ಸ್ಯಾಂಡಲ್‍ವುಡ್‍ನ ವರದನಾಯಕ ಸಿನಿಮಾದಲ್ಲಿ ಮಿಂಚಿದ್ದ ಬಹುಭಾಷಾ ನಟಿ ಸಮೀರಾ ರೆಡ್ಡಿಗೆ ಕೊರೊನಾ ಧೃಡಪಟ್ಟಿದೆ. ಚಿತ್ರರಂಗದಿಂದ ದೂರವಿದ್ದರೂ, ಫಿಟ್‍ನೆಸ್ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಮೀರಾ ರೆಡ್ಡಿ ಸದಾ ಆಕ್ಟೀವ್ ಆಗಿರುತ್ತಿದ್ದರು.

ಕಳೆದ ವರ್ಷ ಜುಲೈನಲ್ಲಿ ಪತಿ ಹಾಗೂ ಅವರ ಮುದ್ದಾದ ಇಬ್ಬರು ಮಕ್ಕಳು, ಅತ್ತೆ ಜೊತೆಗೆ ನಟಿ ಸಮೀರಾ ರೆಡ್ಡಿ ಗೋವಾಗೆ ಸ್ಥಳಾಂತರಗೊಂಡರು. ಇದೀಗ ಸಮೀರಾ ರೆಡ್ಡಿ, ತಮಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಸದ್ಯ ಹೋಂ ಕ್ವಾರಂಟೈನ್‍ನಲ್ಲಿದ್ದು, ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅದೃಷ್ಟವಶತ್ ಸಮೀರಾ ರೆಡ್ಡಿ ಅತ್ತೆಯವರ ವರದಿ ನೆಗೆಟಿವ್ ಬಂದಿದೆ.

ಬಾಲಿವುಡ್ ನಟರಾದ ಅರ್ಜುನ್ ರಾಂಪಾಲ್ ಮತ್ತು ನೀಲ್ ನಿತಿಶ್ ಮುಖೇಶ್‍ಗೂ ಕೂಡ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಹೋಂ ಕ್ವಾರಂಟೈನ್‍ನಲ್ಲಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ನಿನ್ನೆ ನಟ ನಿಖಿಲ್ ಕುಮಾರಸ್ವಾಮಿ, ಸೂನು ಸೂದ್, ಪವನ್ ಕಲ್ಯಾಣ್‍ಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು.

Advertisement
Advertisement
Advertisement