Saturday, 19th October 2019

Recent News

ವಿಮಾನದಲ್ಲಿ ಸಿಕ್ಕ ನಟನಿಗೆ ಸಮೀರ್ ಆಚಾರ್ಯ ಮನವಿ

ಬೆಂಗಳೂರು: ಬಿಗ್ ಬಾಸ್ ಸೀಸನ್- 5 ಸ್ಪರ್ಧಿ ಸಮೀರ್ ಆಚಾರ್ಯ ಅವರು ಇತ್ತೀಚೆಗೆ ವಿಮಾನದಲ್ಲಿ ಕಿಚ್ಚ ಸುದೀಪ್ ಅವರನ್ನು ಆಕಸ್ಮಿಕವಾಗಿ ಭೇಟಿ ಮಾಡಿ ಮಹದಾಯಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸಮೀರ್ ಆಚಾರ್ಯ ತನ್ನ ಪತ್ನಿ ಜೊತೆ ಹೈದರಾಬಾದ್‍ಗೆ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ವಿಮಾನದಲ್ಲಿ ಸಮೀರ್ ಆಚಾರ್ಯ, ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ವಿಮಾನದಲ್ಲಿ ಮೂವರು ಒಟ್ಟಿಗೆ ಕುಳಿತುಕೊಂಡು ಪ್ರಯಾಣದುದ್ದಕ್ಕೂ ಮಾತುಕತೆ ನಡೆಸಿದ್ದಾರೆ.

ವಿಮಾನದಲ್ಲಿ ಸುದೀಪ್ ಜೊತೆ ಪ್ರಯಾಣ ಬೆಳೆಸುವಾಗ ಸಮೀರ್ ಮಹದಾಯಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸುದೀಪ್ ರೈತರಿಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ತಿಳಿಸಿದ್ದಾರೆ.

ಸಮೀರ್ ಬಿಗ್ ಬಾಸ್ ಮನೆಯಲ್ಲಿದ್ದಾಗ ತಮ್ಮ ಊರಿನಲ್ಲಿ ಸ್ವಂತ ಎರಡು ಶಾಲೆಗಳನ್ನು ಆರಂಭ ಮಾಡಬೇಕು ಎಂದು ಹೇಳುತ್ತಿದ್ದರು. ಅಲ್ಲದೇ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅವರು ರೈತರ ಹಾಗೂ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯನ್ನು ಆರಂಭಿಸಿದ್ದಾರೆ.

ಸದ್ಯ ಸಮೀರ್ ಆಚಾರ್ಯ ಟಾಲಿವುಡ್ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಇಂದು ನನಗೆ ಸಾಕಷ್ಟು ಉಪಯೋಗವಾಗಿದೆ. ನನ್ನ ತಂದೆ, ತಾಯಿ, ಹಾಗೂ ಪತ್ನಿ ಸಹಾಯದಿಂದ ಈ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಸಮೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

One thought on “ವಿಮಾನದಲ್ಲಿ ಸಿಕ್ಕ ನಟನಿಗೆ ಸಮೀರ್ ಆಚಾರ್ಯ ಮನವಿ

  1. GOOD ATTEMPT BY SAMEER ACHARYA I THINK SO HUMAN WHO FILLED WITH HUMANITY AND I ALSO THINK HE DONT BELIEVE IN CASTE ALSO

Leave a Reply

Your email address will not be published. Required fields are marked *