ಸಮಂತಾ ಬ್ಯೂಟಿಯನ್ನು ಹೊಗಳಿದ ಕಂಗನಾ

Advertisements

ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಬ್ಯೂಟಿಯನ್ನು ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಹೊಗಳಿದ್ದಾರೆ.

Advertisements

ಯಾವಾಗಲೂ ವಿವಾದದ ಹೇಳಿಕೆಗಳು ಮತ್ತು ಸ್ಟಾರ್‌ಗಳ ಜೊತೆ ನಡೆಯುತ್ತಿದ್ದ ವಾರ್‌ಗೆ ಸುದ್ದಿಯಾಗುತ್ತಿದ್ದ ಕಂಗನಾ ಇಂದು ಸಮಂತಾ ಅವರನ್ನು ಹೊಗಳಿ ಸುದ್ದಿಯಾಗಿದ್ದಾರೆ. ಸಮಂತಾ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ ನಂತರ ತಮ್ಮ ವೃತ್ತಿಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಶೇರ್ ಮಾಡಿದ್ದು, ಆ ಫೋಟೋಗೆ ಅವರ ಅಭಿಮಾನಿಗಳು ಮಾತ್ರವಲ್ಲ ಸೆಲೆಬ್ರೆಟಿಗಳು ಫಿದಾ ಆಗಿದ್ದಾರೆ. ಅದರಲ್ಲಿ ಕಂಗನಾ ಸಹ ಒಬ್ಬರು. ಇದನ್ನೂ ಓದಿ:  ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾ

Advertisements

ಸಮಂತಾ ಫೋಟೋಗೆ ‘ಪ್ರಿಟಿ ವುಮೆನ್’ ಎಂದು ಬರೆದು ಕಂಗನಾ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಸಮಂತಾ ಸಹ ಧನ್ಯವಾದ ಎಂದು ನಗುವಿನ ಎಮೋಜಿಗಳನ್ನು ಕಳುಹಿಸಿದ್ದಾರೆ. ಕಂಗನಾ ಅವರು ಸಮಂತಾ ಅವರನ್ನು ಪ್ರಶಂಸಿಸುತ್ತಿರುವುದು ಇದು ಮೊದಲೇನಲ್ಲ. ಹಿಂದೆ ನಾಗ ಚೈತನ್ಯ ಜೊತೆ ಸಮಂತಾ ವಿಚ್ಛೇದನ ಪಡೆದಾಗ, ಸಮಂತಾ ಬೆಂಬಲವಾಗಿ ಕಂಗನಾ ನಿಂತಿದ್ದರು.

ಸಮಂತಾ ಅವರು ಇತ್ತೀಚೆಗೆ ಮ್ಯಾಗಜೀನ್‍ಗಾಗಿ ಫೋಟೋಶೂಟ್ ಮಾಡಿಸಿದ್ದು, ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಮಂತಾ ಫೋಟೋದಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದು, ಫೋಟೋ ಅಭಿಮಾನಿಗಳ ಜೊತೆಗೆ ಸೆಲೆಬ್ರೆಟಿಗಳನ್ನು ಆಕರ್ಷಿಸುತ್ತಿದೆ. ಕಂಗನಾ ಜೊತೆಗೆ ಸೌತ್ ನಟಿಯರಾದ ಕೀರ್ತಿ ಸುರೇಶ್, ಪ್ರಿಯಾಮಣಿ, ರಾಶಿ ಖನ್ನಾ, ಅಲ್ಲು ಅರ್ಜುನ್ ಪತ್ನಿ ಸ್ನೇಹಾ, ಚಿನ್ಮಯಿ ಶ್ರೀಪಾದ ಕೂಡ ಅವರನ್ನು ಹೊಗಳಿದ್ದಾರೆ. ಇನ್ನೂ ತಾಪ್ಸಿ ಪನ್ನು ಸಮಂತಾ ಅವರ ಪೋಸ್ಟ್ ಗೆ ಲೈಕ್ ಮಾಡಿದ್ದಾರೆ.

Advertisements

Advertisements
Exit mobile version