ʻಖುಷಿʼ ಶೂಟಿಂಗ್ ವೇಳೆ ನೀರಿಗೆ ಬಿದ್ದ ವಾಹನ: ಸಮಂತಾ- ವಿಜಯ್ ದೇವರಕೊಂಡ ಸೇಫ್!

Advertisements

ದಕ್ಷಿಣ ಭಾರತದ ನಿರೀಕ್ಷಿತ `ಖುಷಿ’ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಈ ವೇಳೆ ನಟ ವಿಜಯ್ ದೇವರಕೊಂಡ, ಸಮಂತಾ ಗಾಯಗೊಂಡಿದ್ದಾರೆ. ಸಾಹಸ ದೃಶ್ಯವೊಂದರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ. ಸದ್ಯ ಇಬ್ಪರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisements

`ಖುಷಿ’ ಚಿತ್ರಂಡ ಕೆಲ ದಿನಗಳ ಹಿಂದೆಯೇ ಕಾಶ್ಮೀರದಲ್ಲಿ ಬೀಡು ಬಿಟ್ಟಿತ್ತು. ಚಿತ್ರೀಕರಣಕ್ಕಾಗಿ ವಿಜಯ್ ಹಾಗೂ ಸಮಂತಾ, ನದಿಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗದ ಮೇಲೆ ವಾಹನವನ್ನು ಓಡಿಸಬೇಕಾಗಿತ್ತು. ಆಗ ದುರದೃಷ್ಟವಶಾತ್, ವಾಹನವು ನದಿಗೆ ಬಿದ್ದು, ವಾಹನದಲ್ಲಿದ್ದ ಸಮಂತಾ ಮತ್ತು ವಿಜಯ್ ಬೆನ್ನಿಗೆ ಗಾಯವಾಗಿದೆ. ಇದೀಗ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ.

Advertisements

`ಖುಷಿ’ ಸಿನಿಮಾಗಾಗಿ ವಿಜಯ್ ಮತ್ತು ಸಮಂತಾ ಅವರು ಶೂಟಿಂಗ್‌ನಲ್ಲಿ ಭಾಗಿಯಾದರು. ಶ್ರೀನಗರದ ದಾಲ್ ಲೇಕ್ ಬಳಿ ಶೂಟಿಂಗ್ ಮಾಡುತ್ತಿರುವಾಗ ವಾಹನ ನೀರಿಗೆ ಬಿದ್ದಿದೆ. ಈ ವೇಳೆ ಬೆನ್ನಿಗೆ ಗಾಯವಾಗಿ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರಿಬ್ಬರು ಸ್ಥಳೀಯ ಹೋಟೆಲ್‌ಗೆ ಹೋಗಿದ್ದು, ಸದ್ಯ ವೈದ್ಯರು ಈ ಕಲಾವಿದರಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಭಾರೀ ಭದ್ರತೆಯಲ್ಲಿ ಶೂಟಿಂಗ್ ಮಾಡಲಾಗಿತ್ತು. ಆದರೂ ಅಪಘಾತ ಸಂಭವಿಸಿ, ದುರದೃಷ್ಟವಶಾತ್ ವಿಜಯ್ ಮತ್ತು ಸಮಂತಾ ಸಣ್ಣ ಮಟ್ಟದಲ್ಲಿ ಪೆಟ್ಟಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

Advertisements

`ಖುಷಿ’ ಇದೇ ಡಿಸೆಂಬರ್ 23ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಮಹಾನಟಿ ಸಿನಿಮಾ ನಂತರದಲ್ಲಿ ಸಮಂತಾ, ವಿಜಯ್ ದೇವರಕೊಂಡ ಒಟ್ಟಾಗಿ ನಟಿಸಿದ್ದಾರೆ. ಕಾಶ್ಮೀರದ ಶೂಟಿಂಗ್ ದೃಶ್ಯಗಳನ್ನು ಸಮಂತಾ ಅವರು ಕೆಲ ದಿನಗಳ ಹಿಂದೆ ಹಂಚಿಕೊಂಡಿದ್ದರು. ಇನ್ನು ವಿಶೇಷವಾಗಿ ಸಮಂತಾಗೆ ಕಾಶ್ಮೀರದಲ್ಲಿ `ಖುಷಿ’ ಸಿನಿಮಾ ತಂಡ ಸರ್ಪ್ರೈಸ್ ಹುಟ್ಟುಹಬ್ಬದ ಸೆಲೆಬ್ರೇಷನ್ ಕೂಡ ಮಾಡಿತ್ತು. ಒಟ್ನಲ್ಲಿ ವಿಜಯ್ ಮತ್ತು ಸಮಂತಾ ಸೇಫ್ ಆಗಿರೋದನ್ನ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

Advertisements
Exit mobile version