Sunday, 23rd February 2020

Recent News

ಭಾಯ್‍ಜಾನ್ ಎಂದು ಕತ್ರಿನಾ ಕರೆಯೋದು ಬೇಡ: ಸಲ್ಮಾನ್ ಖಾನ್

ಮುಂಬೈ: ಕತ್ರಿನಾ ಕೈಫ್ ನನಗೆ ಭಾಯ್‍ಜಾನ್ ಬದಲು ‘ಮೇರಾ ಜಾನ್’ ಎಂದು ಕರೆಯಲಿ ಎಂದು ದಬಾಂಗ್ ಸಲ್ಮಾನ್ ಖಾನ್ ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ತಮ್ಮ ಮುಂದಿನ ‘ಭಾರತ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಇಬ್ಬರು ಐಪಿಎಲ್ ಫೈನಲ್‍ಗೆ ಹೋಗಿದ್ದರು. ಬಳಿಕ ಇಬ್ಬರು ತಮ್ಮ ಚಿತ್ರತಂಡದ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾಧ್ಯಮದವರು ಕತ್ರಿನಾ ಅವರಿಗೆ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಪ್ರಶ್ನಿಸಿದ್ದರು. ಬಳಿಕ ನೀವು ಸಲ್ಮಾನ್ ಖಾನ್‍ಗೆ ಭಾಯ್‍ಜಾನ್ ಎಂದು ಕರೆಯುತ್ತೀರಾ ಎಂದು ಕೇಳಿದ್ದರು. ವರದಿಗಾರರ ಪ್ರಶ್ನೆ ಕೇಳಿದ ಸಲ್ಮಾನ್ ಖಾನ್, ‘ನಾನು ನಿಮಗೆ ಭಾಯ್‍ಜಾನ್ ಅವರಿಗೆ ಅಲ್ಲ’ ಎಂದು ಉತ್ತರಿಸಿದ್ದರು.

ಸಲ್ಮಾನ್ ಖಾನ್ ಈ ರೀತಿ ಹೇಳುತ್ತಿದ್ದಂತೆ ಕತ್ರಿನಾ ನಗಲು ಶುರು ಮಾಡಿದ್ದಾರೆ. ಇದಾದ ಬಳಿಕ ಮಾಧ್ಯಮದವರು ‘ನೀವು ಸಲ್ಮಾನ್ ಖಾನ್ ಅವರನ್ನು ಭಾಯ್‍ಜಾನ್ ಎಂದು ಕರೆಯಲು ಇಷ್ಟಪಡುವುದಿಲ್ಲ ಎಂದರೆ ಮತ್ತೆ ಯಾವ ಜಾನ್ ಎಂದು ಕರೆಯುತ್ತೀರಾ’ ಎಂದು ಕ್ರತಿನಾ ಅವರಿಗೆ ಪ್ರಶ್ನಿಸಿದ್ದಾರೆ.

ಮಾಧ್ಯಮದವರು ಕತ್ರಿನಾರನ್ನು ಪ್ರಶ್ನಿಸುತ್ತಿದ್ದಂತೆ ಸಲ್ಮಾನ್ ಖಾನ್ ‘ಮೇರಾ ಜಾನ್'(ನನ್ನ ಜೀವ) ಎಂದು ಕರೆಯಲಿ ಎಂದು ಹೇಳಿದ್ದರು. ಸಲ್ಮಾನ್ ಅವರ ಈ ಮಾತು ಕೇಳಿದ ನಂತರ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಈಗಲೂ ಕತ್ರಿನಾ ಮೇಲೆ ಪ್ರೀತಿ ಇದೆ ಎಂದು ಭಾವಿಸುತ್ತಿದ್ದಾರೆ.

Leave a Reply

Your email address will not be published. Required fields are marked *