Tuesday, 19th November 2019

ಚಿತ್ರದಲ್ಲಿ ಸಲ್ಮಾನ್ ಕಿಸ್ ಮಾಡಲ್ಲ ಏಕೆ? ರಹಸ್ಯ ಬಿಚ್ಚಿಟ್ಟ ಸೋದರ

ಮುಂಬೈ: ನಿರೂಪಕ ಕಪಿಲ್ ಶರ್ಮಾ ಸಾರಥ್ಯದ ಕಾಮಿಡಿ ಶೋ ಮತ್ತೊಮ್ಮೆ ಆರಂಭವಾಗಿದೆ. ಕಳೆದ ವಾರ ನಟ ರಣ್‍ವೀರ್ ಸಿಂಗ್, ನಟಿ ಸಾರಾ ಅಲಿಖಾನ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಆಗಮಿಸಿದ್ದರು. ಈ ವಾರ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ಸೋಹೈಲ್ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಚಿಕೆ ಪ್ರಸಾರವಾಗಲಿದ್ದು, ಪ್ರೋಮೋಗಳು ಭಾರೀ ಸದ್ದು ಮಾಡುತ್ತಿವೆ. ಬಿಡುಗಡೆಯಾಗಿರುವ ಎರಡ್ಮೂರು ಪ್ರೋಮೋಗಳಲ್ಲಿ ಸಲ್ಮಾನ್ ಚಿತ್ರದಲ್ಲಿ ಕಿಸ್ ಮಾಡಲ್ಲ ಎಂಬ ರಹಸ್ಯವನ್ನು ಅರ್ಬಾಜ್ ಖಾನ್ ಬಿಚ್ಚಿಟ್ಟಿದ್ದಾರೆ.

ನಿರೂಪಕ ಕಪಿಲ್ ಶರ್ಮಾ, ಒಂದು ಸಿನಿಮಾ ಒಪ್ಪಿಕೊಂಡಾಗ ಹೊಸ ನಟಿ ಬಂದರೆ ಹೇಗೆ? ಈ ಹಿಂದೆ ಒಂದೆರೆಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ನಟಿಯಾದ್ರೆ ಪರವಾಗಿಲ್ಲ. ಹೊಸ ನಟಿಯೊಂದಿಗೆ ತೆರೆ ಹಂಚಿಕೊಳ್ಳುವ ನಿಮ್ಮ ಅನುಭವ ಹೇಗಿರುತ್ತೆ ಎಂದು ಸಲ್ಮಾನ್ ಗೆ ಪ್ರಶ್ನೆ ಮಾಡಿದರು. ಕಪಿಲ್ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್, ಮೊದಲನೇಯದಾಗಿ ಕಿಸ್ಸಿಂಗ್ ಸೀನ್ ಮಾಡಲ್ಲ. ಹಾಗಾಗಿ ಯಾವುದೇ ತೊಂದರೆ ನನಗೆ ಆಗಲ್ಲ ಎಂದು ಹೇಳಿದರು.

ಸಲ್ಮಾನ್ ಉತ್ತರ ಕೇಳುತ್ತಿದ್ದಂತೆ ಪಕ್ಕದಲ್ಲಿಯೇ ಕುಳಿತಿದ್ದ ಅರ್ಬಾಜ್, ಆಫ್ ಸ್ಕ್ರೀನ್ ನಲ್ಲಿಯೇ ತುಂಬಾನೇ ಕಿಸ್ ಮಾಡ್ತಾರೆ. ತೆರೆಯ ಮೇಲೆ ಮತ್ಯಾಕೆ ಎಂದು ಸೋದರನ ಕಾಲೆಳೆದರು. ಸದ್ಯ ಪ್ರೋಮೋ ಮಾತ್ರ ಬಿಡುಗಡೆಯಾಗಿದ್ದು, ಸೋದರರು ಯಾರ ಯಾರ ಕಾಲೆಳೆದಿದ್ದಾರೆ ಎಂಬುದನ್ನು ಸಂಚಿಕೆ ನೋಡಿದಾಗಲೇ ತಿಳಿಯುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *