Friday, 17th August 2018

Recent News

ಗಾಯಗೊಂಡ ಹದ್ದನ್ನು ರಕ್ಷಿಸಿದ ಸಚಿನ್ – ವಿಡಿಯೋ ವೈರಲ್

ಮುಂಬೈ: ಗಾಯಗೊಂಡ ಹದ್ದನ್ನು ರಕ್ಷಿಸಿ ಬಳಿಕ ಆರೈಕೆ ನೀಡಿ ಮಾನವಿಯತೆ ಮೆರೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ವತಃ ಸಚಿನ್ ಅವರೇ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ, ಅಭಿಮಾನಿಗಳಿಗೆ ನೀವೂ ಸಹ ಪಕ್ಷಿಗಳ ರಕ್ಷಣೆಗೆ ಮುಂದಾಗಿ ಎಂಬ ಸಂದೇಶ ನೀಡಿದ್ದಾರೆ.

ಸಚಿನ್ ನಿವಾಸದ ಬಲ್ಕಾನಿಯಲ್ಲಿ ಗಾಯಗೊಂಡ ಹದ್ದು ಕಾಣಿಸಿಕೊಂಡಿದೆ. ಈ ವೇಳೆ ತಕ್ಷಣ ಸಚಿನ್ ಅದರ ಬಳಿ ತೆರಳಿ ಸ್ವಲ್ಪ ಆಹಾರವನ್ನು ನೀಡಿದ್ದಾರೆ. ಹದ್ದು ಚಿಕ್ಕ ಮರಿಯಾದ ಕಾರಣ ಕಾಗೆಗಳ ದಾಳಿಗೆ ಒಳಗಾಗಿ ಹಾರಾಟ ನಡೆಸಲಾಗದೆ ಸಮಸ್ಯೆ ಎದುರಿಸಿತ್ತು.

ಬಳಿಕ ಪ್ರಾಣಿ ರಕ್ಷಣೆ ಮಾಡುವ ತಂಡದ ಕೆಲ ಸಿಬ್ಬಂದಿಗೆ ಮಾಹಿತಿ ನೀಡಿದ ಸಚಿನ್, ಅದನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮೂರು ದಿನಗಳ ಕಾಲ ಅದನ್ನು ಮನೆಯಲ್ಲೇ ಪೋಷಣೆ ಮಾಡಿ ಪೂರ್ಣ ಗುಣಮುಖವಾದ ಮೇಲೆ ಹಾರಲು ಬಿಟ್ಟಿದ್ದಾರೆ. ಈ ವಿಡಿಯೋ ಅಂತ್ಯದಲ್ಲಿ ಸಾರ್ವಜನಿಕರಿಗೆ ಸಚಿನ್ ಮನವಿಯೊಂದನ್ನು ಮಾಡಿದ್ದು, ಜಾಗತಿಕ ತಾಪಮಾನ ಏರಿಕೆಯಿಂದ ಪಕ್ಷಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಪಕ್ಷಿಗಳಿಗೆ ನಿಮ್ಮ ಮನೆ ಮೇಲೆ ನೀರಿಟ್ಟು ಸಹಾಯ ಮಾಡಿ ಎಂದು ತಿಳಿಸಿದ್ದಾರೆ.

ಸದ್ಯ ಈ ವಿಡಿಯೋ ಇದುವರೆಗೂ 11,28,885 ಬಾರಿ ವಿಕ್ಷಣೆಯಾಗಿದ್ದು, 49,845 ಲೈಕ್ ಪಡೆದುಕೊಂಡಿದೆ. ಅಲ್ಲದೇ 6.5 ಸಾವಿರ ಮಂದಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಸಚಿನ್ ಅವರ ಈ ಕಾರ್ಯಕ್ಕೆ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

Do your bit!

A good deed brightens a dark world. Always be up to lend a helping hand, be it to humans, birds or animals. Do your bit!

Sachin Tendulkarさんの投稿 2018年6月7日(木)

Leave a Reply

Your email address will not be published. Required fields are marked *