Sunday, 19th May 2019

ಮಂಡ್ಯದಲ್ಲಿ ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಪ್ರತಿಧ್ವನಿಸಲಿದೆ – ಸಾರಾ ಮಹೇಶ್ ಎಚ್ಚರಿಕೆ

– ನೀವು ಒಮ್ಮೆ ತಬ್ಬಿಕೊಂಡರೆ 5 ಬಾರಿ ತಬ್ಬಿಕೊಳ್ತೇವೆ
– ಜೆಡಿಎಸ್ ಪ್ರಚಾರ ಸಮಾರಂಭದಲ್ಲಿ ಮಹೇಶ್ ಮಾತು

ಮೈಸೂರು: ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಮಾಡಿಕೊಂಡಿರುವ ದೋಸ್ತಿ ಪಕ್ಷಗಳ ನಡುವೆ ಹೊಂದಾಣಿಕೆ ಕಷ್ಟವಾಗುತ್ತಿದ್ಯಾ ಎಂಬ ಅನುಮಾನ ಮೂಡಿದ್ದು, ಮಂಡ್ಯದಲ್ಲಿ ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಕೂಡ ಪ್ರತಿಧ್ವನಿಸಲಿದೆ ಎಂದು ಸಚಿವ ಸಾರಾ ಮಹೇಶ್ ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ನಗರದಲ್ಲಿ ಪ್ರಚಾರ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ, ನಮ್ಮ ಅಂತರ ಇದ್ದೆ ಇರುತ್ತದೆ. ಮೈತ್ರಿಯಾಗಿ ಸರ್ಕಾರ ನಡೆಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಸ್ನೇಹಿತರೇ ನೀವು ಮಂಡ್ಯದಲ್ಲಿ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಪ್ರತಿಧ್ವನಿಸಲಿದೆ ಎಂದು ತಿಳಿಸಿದರು.

ಮಂಡ್ಯದಲ್ಲಿ ನಮ್ಮನ್ನ ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನ 5 ಬಾರಿ ತಬ್ಬಿಕೊಳ್ಳುತ್ತೇವೆ. ನಿಮಗೆ ಇದು ನೆನಪಿನಲ್ಲಿ ಇರಲಿ. ಈ ಲೋಕಸಭೆ ಚುನಾವಣೆಯಿಂದಲೇ ಇದು ಪ್ರಾರಂಭವಾಗಬೇಕು. ನಾವು ಜಿಲ್ಲೆಯಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೇ ಸೇವೆ ಮಾಡಿದ್ದೇವೆ. ಆದ್ದರಿಂದ ಮೈತ್ರಿ ಧರ್ಮ ಪಾಲಿಸಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಡಿ ಎಂದರು.

ರಾಜ್ಯದ ಯಾವುದೇ ಪಕ್ಷದ ನೇತಾರರನ್ನಾಗಿ ಮಾಡಿದರೂ ಕೂಡ ಜೆಡಿಎಸ್ ಕಾರ್ಯಕರ್ತರು ನಂಬುವುದು ಎಚ್‍ಡಿಡಿ ಕುಟುಂಬವನ್ನು ಮಾತ್ರ. ಆದ್ದರಿಂದ ಕಾರ್ಯಕರ್ತರ ಒಪ್ಪಿಗೆ ಮೇರೆಗೆ ಈ ನಿರ್ಧಾರ ಮಾಡಲಾಗಿದೆ. ಆದರೆ ಅಂಬರೀಶ್ ಅವರೇ ರಾಜಕಾರಣ ಬೇಡ ಎಂದ ಮೇಲೆ ನಿಖಿಲ್ ಅವರ ವಿರುದ್ಧ ಏಕೆ ಸ್ಪರ್ಧೆ ಮಾಡುತ್ತಿದ್ದೀರಾ ಎಂದು ಯೋಚಿಸಿ ಎಂದು ಅವರು ಸುಮಲತಾ ಅವರಲ್ಲಿ ಮನವಿ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *