Karnataka
ಮೈತ್ರಿಗೊಂದಲಕ್ಕೆ ಸಿದ್ದರಾಮಯ್ಯ ಕಾರಣ- ಸಾ.ರಾ. ಮಹೇಶ್

– ಜನತಾದಳ ಶಕ್ತಿಯನ್ನು ಮೈಸೂರಿನಲ್ಲಿ ತೊರಿಸಿದ್ದೇವೆ
– ಯಾರು ನಮ್ಮ ಟಾರ್ಗೆಟ್ ಅಲ್ಲ
ಮೈಸೂರು: ಸಿದ್ದರಾಮಯ್ಯ ಈ ಮಟ್ಟಗೆ ಬೆಳಯಬೇಕಾದರೆ ಜನತಾದಳದ ಅನೇಕ ನಾಯಕರ ತ್ಯಾಗ ಇದೆ ಎನ್ನುವುದ ಮರಿಯ ಬೇಡಿ ಎಂದು ಮಾಜಿ ಸಚಿವ ಸಾರಾ ಮಹೇಶ್ ಟಾಂಗ್ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಮತ್ತು ಕುಮಾರಣ್ಣ ಅವರ ನಡುವೆ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿನ ಕುರಿತಾಗಿ ರಾಜ್ಯದಲ್ಲಿ ಗುಟ್ಟಾಗಿ ಉಳಿದಿಲ್ಲ. ನೀವು ಟೀಕೆ ಮಾಡಿ ಕುಮಾರಣ್ಣ ಅವರನ್ನು ಆದರೆ ಜನತಾದಳವನ್ನು ಪಕ್ಷವನ್ನು ಟೀಕೆ ಮಾಡಿತ್ತಿರಾ? ನಿಮ್ಮ ತವರೂರಾದ ಮೈಸೂರಿನಲ್ಲಿ ಜನತಾದಳ ಶಕ್ತಿ ಏನು ಎಂಬುದನ್ನು ತೋರಿಸಿದ್ದೇವೆ ಎಂದಿದ್ದಾರೆ.
ಮೈತ್ರಿಗೊಂದಲಕ್ಕೆ ನಿಮ್ಮ ರಾಷ್ಟ್ರೀಯ ನಾಯಕರು, ಕಾಂಗ್ರೆಸ್ ನಾಯಕರು ಅಥವಾ ಜೆಡಿಎಸ್ನ ನಾಯಕರು ಯಾರು ಕಾರಣವಲ್ಲ ಬದಲಾಗಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರಿಂದ ಎಂದು ಹೇಳಿದ್ದಾರೆ.
ನೀವು ಬೆಳೆದು ಕಟ್ಟಿ ಇರುವ ಒಂದು ಪ್ರಾದೇಶಿಕ ಪಕ್ಷದ ಕುರಿತಾಗಿ ಮಾತನಾಡ ಬೇಡಿ. ಯಾರು ನಮ್ಮ ಟಾರ್ಗೆಟ್ ಅಲ್ಲ. ಸಿದ್ದರಾಮಯ್ಯ ಅವರು ಕೊಟ್ಟಿರು ಹೇಳಿಕೆ ಬಿಟ್ಟರೆ ನಮಗೆ ನಿಮ್ಮ ಕುರಿತಾಗಿ ಬೇರೆಯಾವುದೇ ಬೇಸರವಿಲ್ಲ ಎಂದು ಹೇಳುವ ಮೂಲಕವಾಗಿ ಸಿದ್ದರಾಮಯ್ಯ ಅವರಿಗೆ ತೀರುಗೇಟು ಕೊಟ್ಟಿದ್ದಾರೆ.
