Connect with us

Latest

ಕೆಲವೇ ಗಂಟೆಯೊಳಗೆ ಇನ್‍ಸ್ಟಾಗ್ರಾಮ್‍ನಲ್ಲಿ 10 ಲಕ್ಷ ಫಾಲೋವರ್ಸ್ ಪಡೆದು ದಾಖಲೆ ಬರೆದ ನಟ

Published

on

ಅಮೆರಿಕಾ: ಹ್ಯಾರಿ ಪಾಟರ್ ಖ್ಯಾತಿಯ ರುಪರ್ಟ್ ಗ್ರಿಂಟ್ ಇನ್‍ಸ್ಟಾಗ್ರಾಮ್ ಖಾತೆ ತೆರೆದು 241 ನಿಮಿಷದಲ್ಲಿ 10 ಲಕ್ಷ ಫಾಲೋರ್ಸ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.

ರುಪರ್ಟ್ ಗ್ರಿಂಟ್, ಹ್ಯಾರಿ ಪಾಟರ್ ಸಿನಿಮಾದಲ್ಲಿ ನಟಿಸಿ ಇವರು ರಾನ್ ವೀಸ್ಲೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಇವರು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ ಗಂಟೆಗಳಲ್ಲೇ ಲಕ್ಷಾಂತರ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

ಹಾಲಿವುಡ್ ನಟ ರುಪರ್ಟ್ ಗ್ರಿಂಟ್ 10 ವರ್ಷಗಳ ನಂತರ ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ಮಂದಿ ಫಾಲೋ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಸಮಯದಲ್ಲಿ ಅತೀಹೆಚ್ಚು ಫಾಲೋವರ್ಸ್ ಹೊಂದಿರುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೀಗ ರುಪರ್ಟ್ ಇನ್‍ಸ್ಟಾದಲ್ಲಿ ಖಾತೆ ತೆಗೆದು ತನ್ನ ಪುತ್ರಿಯನ್ನು ಎತ್ತಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಚ್ಚರಿ ಎಂದರೆ 241 ನಿಮಿಷದಲ್ಲಿ ರುಪರ್ಟ್ 10 ಲಕ್ಷ ಫಾಲೋರ್ಸ ಪಡೆದಿದ್ದಾರೆ. ಇನ್ನು ಮಗಳನ್ನು ಎತ್ತಿಕೊಂಡಿರುವ ಫೋಟೋದ ಜೊತೆಗೆ ರುಪರ್ಟ್ ‘ಹತ್ತು ವರ್ಷದ ನಂತರ ಇನ್‍ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದೇನೆ. ನನ್ನ ಮಗಳನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ.

 

View this post on Instagram

 

A post shared by Rupert Grint (@rupertgrint)

Click to comment

Leave a Reply

Your email address will not be published. Required fields are marked *

www.publictv.in