Connect with us

Bengaluru City

ಆರ್‌ಎಸ್‌ಎಸ್, ಬಿಜೆಪಿ ಮುಖಂಡರ ಹತ್ಯೆಗೈದು ನಾಪತ್ತೆಯಾಗಿದ್ದ ಆರೋಪಿ ಅರೆಸ್ಟ್

Published

on

ಬೆಂಗಳೂರು: ಮೈಸೂರಿನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಮುಖಂಡರನ್ನ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅತೀಕ್ ಶರೀಫ್ ಅಲಿಯಾಸ್ ಟಿಂಬರ್ ಅತೀಕ್ ಬಂಧಿತ ಆರೋಪಿ. 2009 ರಿಂದ 2016 ರ ವರೆಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ತಲೆಮರೆಸಿಕೊಂಡಿದ್ದ.

ಈ ಎಲ್ಲ ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದ್ದು, ಸದ್ಯ ಮೈಸೂರು ಪೊಲೀಸರ ಅತೀಕ್ ಶರೀಫ್‍ನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಯಾವೆಲ್ಲ ಆರೋಪವಿದೆ?
2008, ಜುಲೈ 12: ಮೈಸೂರಿನಲ್ಲಿ ಬಿಜೆಪಿ ನಾಯಕ ಶಶಿ ಕುಮಾರ್ ಕೊಲೆ
2009, ಜುಲೈ 3: ಮೈಸೂರಿನಲ್ಲಿ ಆರ್‌ಎಸ್‌ಎಸ್ ನಾಯಕ ಗಿರಿಧರ್ ಕೊಲೆಯತ್ನ
2009, ಜೂನ್ 9: ಮೈಸೂರಿನಲ್ಲಿ ಆರ್‌ಎಸ್‌ಎಸ್ ಮುಖಂಡ ರಮೇಶ್ ಕೊಲೆ
2009, ಜೂನ್ 9: ಮೈಸೂರಿನಲ್ಲಿ ಆರ್‌ಎಸ್‌ಎಸ್ ಮುಖಂಡ ಆನಂದ್ ಪೈ ಕೊಲೆಯತ್ನ
2009, ನವೆಂಬರ್ 12: ಮೈಸೂರಿನಲ್ಲಿ ಆರ್‌ಎಸ್‌ಎಸ್ ಮುಖಂಡ ಹರೀಶ್ ಕೊಲೆ