Bengaluru City
ಆರ್ಆರ್ನಗರದಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮುನಿರತ್ನ – ಅಧಿಕೃತ ಘೋಷಣೆಯೊಂದೇ ಬಾಕಿ

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಎರಡು ಬಾರಿ ಕಾಂಗ್ರೆಸ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.
20ನೇ ಸುತ್ತು ಮುಕ್ತಾಯಗೊಂಡಿದ್ದು ಬಿಜೆಪಿಯ ಮುನಿರತ್ನ 1,03,139 ಕಾಂಗ್ರೆಸ್ನ ಕುಸುಮಾ 58,258 ಜೆಡಿಎಸ್ ಕೇಶವಮೂರ್ತಿ 8,794, ನೋಟಾಗೆ 1,878 ಮತ ಬಿದ್ದಿದೆ. ಮುನಿರತ್ನ 42,045 ಮತಗಳಿಂದ ಮುನ್ನಡೆಯಲ್ಲಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಆರಂಭದಿಂದಲೂ ಮುನಿರತ್ನ ಮುನ್ನಡೆ ಸಾಧಿಸಿದ್ದರು. ಈ ಮುನ್ನಡೆಯನ್ನು ನಿರಂತರವಾಗಿ ಕಾದುಕೊಂಡು ಬಂದ ಪರಿಣಾಮ ಮೊದಲ ಬಾರಿಗೆ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಜಯಗಳಿಸಿದೆ.
