Connect with us

Bengaluru City

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿ ಖುಷ್ಬೂ ರೋಡ್ ಶೋ – ಅಬ್ಬರದ ಪ್ರಚಾರ

Published

on

– ಮುನಿರತ್ನರಿಗೆ ದೊಡ್ಡ ಮಟ್ಟದಲ್ಲಿ ಜಯಭೇರಿ ಸಿಗುವ ವಿಶ್ವಾಸವಿದೆ – ಖುಷ್ಬೂ

ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಸಮರದ ರಣರಂಗದಲ್ಲಿ ರಾಜಕೀಯ ನಾಯಕರ ವಾಕ್ಸಮರ ವೈಯಕ್ತಿಕ ಮಟ್ಟಕ್ಕೆ ಹೋಗಿದೆ. ಆರ್‍ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ತಾಯಿ ಮಾರಾಟಮಾಡಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಅವಹೇಳನಕಾರಿ ಹೇಳಿಕೆಗೆ ನೊಂದು ಮುನಿರತ್ನ ಕಣ್ಣೀರು ಹಾಕಿದ್ದರು. ಇದೆಲ್ಲದರ ಮಧ್ಯೆ ಮುನಿರತ್ನ ಪರ ಇಂದು ದಕ್ಷಿಣ ಭಾರತ ಪ್ರಖ್ಯಾತ ಚಿತ್ರನಟಿ, ಬಿಜೆಪಿ ನಾಯಕಿ ಖುಷ್ಬೂ ಅಬ್ಬರದ ರೋಡ್ ಶೋ ನಡೆಸಿ ಮತಯಾಚಿಸಿದರು.

ಸಂಜೆ 5 ರಿಂದ ಲಗ್ಗೆರೆ, ಲಕ್ಷ್ಮಿದೇವಿನಗರ, ಕೂಲಿ ನಗರ, ಖಾತಾ ನಗರ, ಸಿದ್ಧಾರ್ಥ ನಗರಗಳಲ್ಲಿ ನಟಿ ಖುಷ್ಬೂ ರೋಡ್ ಶೋ ನಡೆಸಿ, ಅಬ್ಬರ ಪ್ರಚಾರ ಮಾಡಿ ಮುನಿರತ್ನ ಪರ ಮತಯಾಚನೆ ಮಾಡಿದರು. ಹೀಗಾಗಿ ಆರ್‍ಆರ್ ನಗರ ಕ್ಷೇತ್ರದಲ್ಲಿ ಪ್ರಚಾರ ಇಂದು ರಂಗೇರಿತ್ತು.

ರಾಜರಾಜೇಶ್ವರಿ ನಗರ ಕ್ಷೇತ್ರದ ಕೂಲಿ ನಗರದಲ್ಲಿ ತಮಿಳಿನಲ್ಲಿ ಖುಷ್ಬೂ ಮತಯಾಚನೆ ಮಾಡಿದ್ದಾರೆ. ವಣಕ್ಕಂ ಅಂತ ತಮಿಳಲ್ಲಿ ಭಾಷಣ ಶುರು ಮಾಡಿ, ಬಳಿಕ ಎಲ್ಲರೂ ಚೆನ್ನಾಗಿದ್ದೀರಾ ಎಂದು ಕನ್ನಡದಲ್ಲಿ ಕೇಳಿದರು. ಮುನಿರತ್ನರಿಗೆ ಮತ ಹಾಕಿ ಗೆಲ್ಲಿಸಿ. ನಿಮಗೆ ನನ್ನ ಮೇಲೆ ದೊಡ್ಡ ಅಭಿಮಾನ ಇದೆ. ಆ ಅಭಿಮಾನಕ್ಕಾಗಿ ನಾನಿಲ್ಲಿ ಮುನಿರತ್ನ ಪರ ಮತಯಾಚನೆಗೆ ಬಂದಿದ್ದೇನೆ. ಮುನಿರತ್ನ ಉತ್ತಮ ಶಾಸಕ, ಅವರು ಗೆದ್ದರೆ ಅಭಿವೃದ್ಧಿಗೆ ಕಡಿಮೆ ಮಾಡಲ್ಲ. ಮುನಿರತ್ನರಿಗೆ ದೊಡ್ಡ ಮಟ್ಟದಲ್ಲಿ ಜಯಭೇರಿ ಸಿಗುವ ವಿಶ್ವಾಸ ನನಗಿದೆ ಎಂದರು.

ಕನ್ನಡ ಅರ್ಥ ಆಗುತ್ತದೆ. ಆದರೆ ಕನ್ನಡ ಮಾತನಾಡಲು ಸ್ವಲ್ಪ ಸಮಯ ಹಿಡಿಯುತ್ತೆ. ಅಷ್ಟು ಸಮಯ ಇಲ್ಲ ಎಂದು ಕನ್ನಡದಲ್ಲೇ ಹೇಳಿದರು. ಕ್ಷೇತ್ರದ ವಿವಿಧ ಭಾಗಗಳಲ್ಲಿ ರೋಡ್ ಶೋ ಮೂಲಕ ಖುಷ್ಬೂ ಮತಯಾಚಿಸಿದರು. ಒಟ್ಟಾರೆ ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಪ್ರಚಾರ ರಂಗೇರಿತ್ತು.

ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮುನಿರತ್ನ, ಖುಷ್ಬೂ ಅವರು ನನ್ನ ಪರ ಮತಯಾಚನೆಗೆ ಬಂದಿದ್ದಾರೆ. ನಿಮ್ಮ ಪರವಾಗಿ ಖುಷ್ಬೂ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಖುಷ್ಬೂ ನನಗೆ ಒಳ್ಳೆಯದನ್ನು ಬಯಸಿಕೊಂಡು ಬರುತ್ತಿರುವ ಅಮ್ಮ. 22 ವರ್ಷಗಳಿಂದ ಖುಷ್ಬೂ ಅಮ್ಮನವರ ಜೊತೆ ಬಾಂಧವ್ಯ ಇದೆ. ನನ್ನ ಮೊದಲ ಸಿನಿಮಾ ಆಂಟಿ ಪ್ರೀತ್ಸೆಗೆ ಅವರು ನಾಯಕಿಯಾಗಿದ್ದರು. ಆಗಿನಿಂದ ಇಲ್ಲಿಯವರೆಗೂ ಅವರ ಜೊತೆ ಉತ್ತಮ ಒಡನಾಟ ಇದೆ. ನಿಮ್ಮ ಮುನಿರತ್ನರನ್ನು ಮೂರನೇ ಬಾರಿಗೆ ಗೆಲ್ಲಿಸುತ್ತೀರೆಂಬ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *