Connect with us

Bengaluru City

ವಿಶೇಷ ವಿಡಿಯೋ ಮೂಲಕ ರಾಜ್ಯೋತ್ಸವ ಶುಭಾಶಯ ತಿಳಿಸಿದ ಆರ್‌ಸಿಬಿ ಆಟಗಾರರು

Published

on

ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ವಿವಿಧ ಗಣ್ಯರು ಶುಭ ಕೋರುತ್ತಿದ್ದಾರೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಶುಭಾಶಯ ತಿಳಿಸಿದ್ದು, ತಂಡದ ಆಟಗಾರರು ಮಾತನಾಡಿ, ಸಂತಸ ವ್ಯಕ್ತಪಡಿಸಿದ್ದರೆ.

ಆರ್‌ಸಿಬಿ ಟ್ವಿಟ್ಟರ್ ನ ಅಧಿಕೃತ ಖಾತೆಯ ಮೂಲಕ ವಿಡಿಯೋ ಟ್ವೀಟ್ ಮಾಡಿದ್ದು, ಈ ವಿಶೇಷ ವಿಡಿಯೋದಲ್ಲಿ ಮಾತನಾಡಿ ಶುಭ ಕೋರಿದ್ದಾರೆ. ತಂಡದ ನಾಯಕ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಸೇರಿದಂತೆ ದೇಶೀಯ ಆಟಗಾರರು ಕನ್ನಡದಲ್ಲೇ ಶುಭಾಶಯ ತಿಳಿಸಿದರೆ, ಎಬಿ ಡಿವಿಲಿಯರ್ಸ್ ಸೇರಿದಂತೆ ವಿದೇಶಿ ಆಟಗಾರರು ಇಂಗ್ಲಿಷ್‍ನಲ್ಲಿ ಶುಭ ಕೋರಿದ್ದಾರೆ. ಈ ವಿಶೇಷ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಆರಂಭದಲ್ಲಿ ದೇವತ್ ಪಡಿಕ್ಕಲ್, ನಂತರ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಹೀಗೇ ಸಾಲು ಸಾಲಾಗಿ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದು, ಟ್ವಿಟ್ಟರ್ ಸೇರಿದಂತೆ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದೆ. ಈ ಮೂಲಕ ವಾರ್ನರ್ ಪಡೆ ಪ್ಲೇ ಆಫ್ ಸನಿಹಕ್ಕೆ ಹೋಗಿದ್ದರೆ, ಕೊಹ್ಲಿ ಪಡೆ ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ. ಇದನ್ನೂ ಓದಿ: ಪ್ಲೇ ಆಫ್ ನಿಂದ ದೂರ ಸರಿಯುತ್ತಿರುವ ಆರ್‌ಸಿಬಿ – ವಾರ್ನರ್ ಪಡೆಗೆ 5 ವಿಕೆಟ್‍ಗಳ ಜಯ

ಪ್ಲೇ ಆಫ್
ಸತತವಾಗಿ ಎರಡು ಸೋಲನ್ನು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ. ಈಗ 13 ಪಂದ್ಯಗಳಿಂದ 14 ಅಂಕಗಳಿಸಿರುವ ಬೆಂಗಳೂರು ಮುಂದಿನ ಪಂದ್ಯವನ್ನು ಸೋಮವಾರ ಡೆಲ್ಲಿ ವಿರುದ್ಧ ಆಡಲಿದೆ. ಆದರೆ ಡೆಲ್ಲಿ ಕೂಡ 13 ಪಂದ್ಯಗಳನ್ನು ಆಡಿ 14 ಅಂಕ ಗಳಿಸಿದೆ. ಹೀಗಾಗಿ ಈ ಎರಡು ತಂಡಗಳಿಗೂ ಸೋಮವಾರದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಈ ಮ್ಯಾಚಿನಲ್ಲಿ ಗೆದ್ದವರು ಸುಲಭವಾಗಿ ಪ್ಲೇ ಆಫ್ ತಲುಪಲಿದ್ದಾರೆ. ಸೋತವರ ಭವಿಷ್ಯ ನೆಟ್ ರನ್‍ರೇಟ್ ಆಧಾರದ ಮೇಲೆ ನಿರ್ಧಾರವಾಗಲಿದೆ.

Click to comment

Leave a Reply

Your email address will not be published. Required fields are marked *