Connect with us

Bengaluru City

ಆರ್‌ಸಿಬಿ ತಂಡದ ಇನ್ನೊಬ್ಬ ಸ್ಟಾರ್ ಆಟಗಾರನಿಗೆ ಕೊರೊನಾ

Published

on

ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ 2 ದಿನ ಬಾಕಿ ಉಳಿದುಕೊಂಡಂತೆ ಆರ್‌ಸಿಬಿ ತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಡೇನಿಯಲ್ ಸ್ಯಾಮ್ಸ್ ಅವರಿಗೆ ಕೊರೊನಾ ದೃಢಪಟ್ಟಿದೆ.

ಐಪಿಎಲ್‍ಗಾಗಿ ಸ್ಯಾಮ್ಸ್ ಆಸ್ಟ್ರೇಲಿಯಾದಿಂದ ಆಗಮಿಸಿ ಚೆನ್ನೈಗೆ ಬಂದಿಳಿದು ಕೊರೊನಾ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿತ್ತು. ಆ ಬಳಿಕ ಎರಡನೇ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ಆಗಿದೆ.

ಈ ಕುರಿತು ಆರ್‌ಸಿಬಿ ಫ್ರಾಂಚೈಸ್ ಟ್ಟಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದು, ಸ್ಯಾಮ್ಸ್ ಏಪ್ರಿಲ್ 3 ರಂದು ಕೊರೊನಾ ಟೆಸ್ಟ್ ಗೆ ಒಳಪಟ್ಟಾಗ ನೆಗೆಟಿವ್ ವರದಿಯಾಗಿತ್ತು, ಆ ಬಳಿಕ ಏಪ್ರಿಲ್ 7 ರಂದು ಕೊರೊನಾ ಟೆಸ್ಟ್ ವೇಲೆ ಅವರಿಗೆ ಪಾಸಿಟಿವ್ ವರದಿಯಾಗಿದೆ. ಪ್ರಸ್ತುತ ಎಲ್ಲಾ ವೈದ್ಯಕೀಯ ಪರೀಕ್ಷೆಯೊಂದಿಗೆ ಐಸೋಲೇಷನ್‍ಗೆ ಒಳಗಾಗಿದ್ದಾರೆ ಎಂದು ತಿಳಿಸಿದೆ.

ಡೇನಿಯಲ್ ಸ್ಯಾಮ್ಸ್ ಕಳೆದ ಬಾರಿಯ ಐಪಿಎಲ್‍ನಲ್ಲಿ ಡೆಲ್ಲಿ ತಂಡದ ಪರವಾಗಿ 3 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈಬಾರಿ ಆರ್‌ಸಿಬಿ ಹರಾಜಿನಲ್ಲಿ ಅವರನ್ನು ಖರೀದಿಸಿತ್ತು. ಆದರೆ ಇದೀಗ ಟೂರ್ನಿ ಆರಂಭಕ್ಕೂ ಮೊದಲೇ ಅವರಿಗೆ ಕೊರೊನಾ ವಕ್ಕರಿಸಿಕೊಂಡಿದೆ.

ಈ ಮೊದಲು ಆರ್‌ಸಿಬಿ ತಂಡದ ಆರಂಭಿಕ ಆಟಗಾರ ಕನ್ನಡಿಗ ದೇವದತ್ ಪಡಿಕಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಅವರು ಕೂಡ ಐಸೋಲೇಷನ್‍ಗೆ ಒಳಗಾಗಿದ್ದಾರೆ.

ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 9 ರಂದು ಮುಂಬೈ ವಿರುದ್ಧ ಆಡಲಿದೆ. ಎಪ್ರಿಲ್ 9 ರಿಂದ ಮೇ 30ರ ವರೆಗೆ ಒಟ್ಟು 6 ನಗರಗಳಲ್ಲಿ ಐಪಿಎಲ್ ಪಂದ್ಯಾಟಗಳು ನಡೆಯಲಿದೆ.

Click to comment

Leave a Reply

Your email address will not be published. Required fields are marked *