Connect with us

Cricket

ಆರಂಭದಲ್ಲಿ ಎಡವಿದರೂ ಕೊನೆಯಲ್ಲಿ ಕೊಹ್ಲಿ ಅಬ್ಬರ – ಚೆನ್ನೈಗೆ 170 ರನ್‍ಗಳ ಟಾರ್ಗೆಟ್

Published

on

– ದುಬೆ, ವಿರಾಟ್ ಉತ್ತಮ ಜೊತೆಯಾಟ
– ಶೂನ್ಯಕ್ಕೆ ಔಟ್ ಆದ ವಿಲಿಯರ್ಸ್

ದುಬೈ: ಇಂದು ಐಪಿಎಲ್-2020ಯ 25ನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 170 ರನ್‍ಗಳ ಗುರಿಯನ್ನು ನೀಡಿದೆ.

ವಿರಾಟ್ ಸ್ಫೋಟಕ ಆಟ
ಮೊದಲ 11 ಓವರಿಗೆ 67 ರನ್ ಗಳಸಿ ಮೂರು ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿದ್ದ ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ನೆರವಾದರು. 52 ಬಾಲಿನಲ್ಲಿ ನಾಲ್ಕು ಸಿಕ್ಸ್ ಮತ್ತು ನಾಲ್ಕು ಬೌಂಡರಿಗಳ ಸಮೇತ ಕೊಹ್ಲಿ ಬರೋಬ್ಬರಿ 90 ರನ್‍ಗಳಿಸಿದರು. ಜೊತೆಗೆ ದುಬೆ ಕೊಹ್ಲಿ ಜೊತೆಗೂಡಿ 33 ಬಾಲಿನಲ್ಲಿ 75 ರನ್‍ಗಳ ಜೊತೆಯಾಟವಾಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಬಂದ ಬೆಂಗಳೂರು ತಂಡ ಆರಂಭಕರಾದ ದೇವದತ್ ಪಡಿಕ್ಕಲ್ ಮತ್ತು ಫಿಂಚ್ ಅವರು ಮಂದಗತಿಯ ಬ್ಯಾಟಿಂಗ್‍ಗೆ ಮುಂದಾದರು. ಆದರೆ 2ನೇ ಓವರ್ ಐದನೇ ಬಾಲಿನಲ್ಲಿ ಫಿಂಚ್, ದೀಪಕ್ ಚಹರ್ ಅವರಿಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ನಿಧಾನವಾಗಿ ತಂಡಕ್ಕೆ ರನ್ ಸೇರಿಸಿದರು. ಹೀಗಾಗಿ ಆರು ಓವರ್ ಮುಕ್ತಾಯಕ್ಕೆ ಆರ್‌ಸಿಬಿ ಒಂದು ವಿಕೆಟ್ ಕಳೆದುಕೊಂಡು 36 ರನ್ ಸೇರಿಸಿತು.

ನಂತರ ಸ್ಫೋಟಕ ಬ್ಯಾಟಿಂಗ್ ಮುಂದಾದ ವಿರಾಟ್ ದೇವದತ್ ಪಡಿಕ್ಕಲ್ ಜೋಡಿ 41 ಬಾಲಿಗೆ ಅರ್ಧಶತಕದ ಜೊತೆಯಾಟವಾಡಿತು. ಈ ಮೂಲಕ 10 ಓವರ್ ಮುಕ್ತಾಯಕ್ಕೆ ಆರ್‌ಸಿಬಿ ಒಂದು ವಿಕೆಟ್ ಕಳೆದುಕೊಂಡು 65 ರನ್ ಹೊಡೆಯಿತು. ಆದರೆ 10ನೇ ಓವರ್ ಎರಡನೇ ಬಾಲಿನಲ್ಲಿ 34 ಬಾಲಿಗೆ 33 ರನ್ ಸಿಡಿಸಿದ್ದ ಇನ್ ಫಾರ್ಮ್ ಆಟಗಾರ ದೇವದತ್ ಪಡಿಕ್ಕಲ್ ಅವರು ಶಾರ್ದುಲ್ ಠಾಕೂರ್ ಅವರ ಬೌಲಿಂಗ್‍ಗೆ ಔಟ್ ಆದರು. ನಂತರ ಬಂದ ಎಬಿ ಡಿವಿಲಿಯರ್ಸ್ ಅವರು ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು.

ಇದಾದ ನಂತರ ಒಂದು ಸಿಕ್ಸರ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ್ದ ವಾಷಿಂಗ್ಟನ್ ಸುಂದರ್ ಅವರು 10 ರನ್ ಗಳಸಿ ವಿಕೆಟ್ ಕೀಪರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಈ ಮೂಲಕ ಬೆಂಗಳೂರು ತಂಡ 15 ಓವರ್ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 95 ರನ್ ಪೇರಿಸಿತು. ಇದೇ ವೇಳೆ ವಿರಾಟ್ ಕೊಹ್ಲಿ ಅವರು 39 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಈ ಫಿಫ್ಟಿಯ ಮೂಲಕ ಐಪಿಎಲ್‍ನಲ್ಲಿ ತನ್ನ 39ನೇ ಅರ್ಧಶತಕ ದಾಖಲಿಸಿದರು.

ಅರ್ಧಶತಕದ ನಂತರ ಅಬ್ಬರದ ಬ್ಯಾಟಿಂಗ್ ಮುಂದಾದ ವಿರಾಟ್ ಕೊಹ್ಲಿ ಅವರು, 18ನೇ ಒಂದೇ ಓವರಿನಲ್ಲಿ 24 ರನ್ ಸಿಡಿಸಿ ಮಿಂಚಿದರು. ಜೊತೆಗೆ ಕೊಹ್ಲಿ ಮತ್ತು ದುಬೆ ಉತ್ತಮ ಜೊತೆಯಾಟವಾಡಿ 25 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಕೊನೆಯವರೆಗೂ ಔಟ್ ಆಗದೇ ತಂಡವನ್ನು 160 ಗಡಿ ದಾಟಿಸಿದರು.

Click to comment

Leave a Reply

Your email address will not be published. Required fields are marked *