Connect with us

Cricket

ಇಂದು ಫೈನಲ್ ಆಡಿ ಐಪಿಎಲ್‍ನಲ್ಲಿ ವಿಶೇಷ ಸಾಧನೆ ಮಾಡಲಿದ್ದಾರೆ ಹಿಟ್‍ಮ್ಯಾನ್

Published

on

Share this

ಅಬುಧಾಬಿ: ಇಂದು ನಡೆಯಲಿರುವ ಐಪಿಎಲ್-2020ಯ ಫೈನಲ್ ಆಡುವ ಮೂಲಕ ಹೊಸ ಸಾಧನೆ ಮಾಡಲು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಸಿದ್ಧವಾಗಿದ್ದಾರೆ.

ಇಂದು ದುಬೈ ಮೈದಾನದಲ್ಲಿ ಐಪಿಎಲ್-2020 ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯದ್ದಕ್ಕೂ ಉತ್ತಮ ಪ್ರದರ್ಶನ ತೋರಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪೈನಲ್ ಪಂದ್ಯದಲ್ಲಿ ಸೆಣೆಸಾಡಲಿವೆ. ಇಂದು ಸಂಜೆ ಏಳು ಗಂಟೆಗೆ ಮ್ಯಾಚ್ ಆರಂಭವಾಗಲಿದೆ. ಈ ಪಂದ್ಯ ಆಡಲಿರುವ ರೋಹಿತ್ ಶರ್ಮಾ ಹೊಸ ಸಾಧನೆಯ ಅಂಚಿನಲ್ಲಿದ್ದಾರೆ.

ಐಪಿಎಲ್‍ನಲ್ಲಿ 2008ರಿಂದಲೂ ಆಡಿಕೊಂಡು ಬಂದಿರುವ ರೋಹಿತ್ ಇಲ್ಲಿಯವರೆಗೂ ಬರೋಬ್ಬರಿ 199 ಪಂದ್ಯಗಳನ್ನು ಆಡಿದ್ದಾರೆ. ಇಂದು ನಡೆಯಲಿರುವ ಫೈನಲ್ ಅಲ್ಲಿ ರೋಹಿತ್ ಆಡುವ ಮೂಲಕ ಐಪಿಎಲ್‍ನಲ್ಲಿ 200 ಒಂದ್ಯಗಳನ್ನಾಡಿದ ಎರಡನೇ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯವರು 200 ಪಂದ್ಯಗಳನ್ನಾಡಿ, 200 ಐಪಿಎಲ್ ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದರು.

ಐಪಿಎಲ್‍ನಲ್ಲಿ 5,162 ರನ್ ಗಳಿಸಿರುವ ರೋಹಿತ್ ಶರ್ಮಾ ಐಪಿಎಲ್‍ನ ಐದನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‍ಮನ್ ಆಗಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರೋಹಿತ್, ಕೇವಲ ಏಳು ಆವೃತ್ತಿಯಲ್ಲಿ ತಮ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕು ಬಾರೀ ಚಾಂಪಿಯನ್ ಆಗುವಂತೆ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement