CricketLatestMain PostSports

3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸತತ 8 ಸೋಲಿನಿಂದಾಗಿ ಕಂಗೆಟ್ಟಿದ್ದು, ಈಗಾಗಲೇ ತಂಡದ ಪ್ಲೇ-ಆಫ್ ಕನಸು ಸಹ ಬಹುತೇಕ ಮುಚ್ಚಿದಂತಾಗಿದೆ. ಆದಾಗ್ಯೂ ಐಪಿಎಲ್ ಹೊರತಾಗಿ ರೋಹಿತ್ ಶರ್ಮಾ ಇತ್ತೀಚೆಗೆ ಐಷಾರಾಮಿ ಕಾರೊಂದನ್ನು ಖರೀದಿಸಿ ಎಲ್ಲರ ಗಮನಸೆಳೆದಿದ್ದಾರೆ.

ಟೀಮ್ ಇಂಡಿಯಾದ ಎಲ್ಲಾ ಮಾದರಿಯ ನಾಯಕರಾದ ರೋಹಿತ್ ಶರ್ಮಾ ಬ್ಲೂ ಎಲಿಯಸ್ ಎಂದು ಕರೆಯಲ್ಪಡುವ ಕಡುನೀಲಿ ಬಣ್ಣದ ಕಾರು ಖರಿದೀಸಿದ್ದಾರೆ. ರೋಹಿತ್ ಶರ್ಮಾ ನೀಲಿ ಬಣ್ಣದ ಕಾರುಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಈ ಕಾರಿನ ವಿಶೇಷತೆಯೇನೆಂದರೆ ಇದು ಟೀಮ್ ಇಂಡಿಯಾದ ಜೆರ್ಸಿಯ ಬಣ್ಣವನ್ನು ಹೋಲುತ್ತದೆ. ವರದಿಗಳ ಪ್ರಕಾರ, ಹೊಸ ಲ್ಯಾಂಬೋರ್ಗಿನಿ ಉರಸ್ ಕಾರನ್ನು ಅವರು ಖರೀದಿಸಿದ್ದು, ಕಾರಿನ ಬೆಲೆ ಬರೋಬ್ಬರಿ 3.10 ಕೋಟಿ ರೂ. ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

MONEY

ಕಾರಿನ ವಿಶೇಷತೆ ಏನು?
ಈ ಕಾರು ಪೆಟ್ರೋಲ್ ಇಂಜಿನ್‍ದಾಗಿದ್ದು, ಇದು 22-ಇಂಚಿನ ಡೈಮಂಡ್ ಕಟ್ ರೀಮ್‍ಗಳೊಂದಿಗೆ ಸ್ಪೋರ್ಟಿ ಒಳಾಂಗಣವನ್ನು ಹೊಂದಿದೆ. ಸ್ವಯಂಚಾಲಿತ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಇದರಿಲ್ಲಿದೆ. ಸುಮಾರು 5 ಸೀಟುಗಳನ್ನು ಈ ಕಾರು ಹೊಂದಿದ್ದು, 7.87 ಕೆಎಂಪಿಎಲ್ ಮೈಲೇಜ್ ಇದರದ್ದಾಗಿದೆ. ಈ ಐಷಾರಾಮಿ ಕಾರನ್ನು ಭಾರತದಲ್ಲಿ ಕೆಲವೇ ಜನ ಹೊಂದಿದ್ದು, ಅದರಲ್ಲಿ ಹಿಟ್ ಮ್ಯಾನ್ ಕೂಡಾ ಒಬ್ಬರು. ಇದನ್ನೂ ಓದಿ: ನನ್ನ ಮತ್ತು ಮೈಕಲ್ ಕ್ಲಾರ್ಕ್ ಸಂಬಂಧ ಕೆಡಲು ಐಪಿಎಲ್ ಕಾರಣ: ಸೈಮಂಡ್ಸ್

ಐಪಿಎಲ್ 2022ರಲ್ಲಿ ಹಿಟ್ ಮ್ಯಾನ್ ರೋಹಿತ್ ಅಷ್ಟೇನು ಹೇಳಿಕೊಳ್ಳುವಷ್ಟು ತಮ್ಮ ಆಟವನ್ನು ಪದರ್ಶಿಸುತ್ತಿಲ್ಲ. ಕಳಪೆ ಫಾರ್ಮ್‍ನಿಂದಾಗಿ ಈಗಾಗಲೇ ಟ್ರೋಲಿಗರಿಗೆ ಗುರಿಯಾಗಿದ್ದಾರೆ. ನಿನ್ನೆ ನಡೆದ ಎಮ್‍ಐ ಮತ್ತು ಎಲ್‍ಎಸ್‍ಜೆ ಪಂದ್ಯದಲ್ಲಿ ಲಕ್ನೋ ಬೌಲರ್‌ಗಳ ಸಂಘಟಿತ ಪ್ರದರ್ಶನದ ಮುಂದೆ ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಲಷ್ಟೇ ಶಕ್ತವಾಗಿ ಸತತ 8ನೇ ಸೋಲುಂಡಿದೆ.

Leave a Reply

Your email address will not be published.

Back to top button