Monday, 22nd April 2019

Recent News

ಯಶ್ ಮನೆಗೆ ಪೊಲೀಸ್ ಭದ್ರತೆ

ಬೆಂಗಳೂರು: ನಟ, ರಾಕಿಂಗ್ ಸ್ಟಾರ್ ಯಶ್ ಮನೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ ನಟ ದರ್ಶನ್ ಮೇಲೆ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಮುನ್ನೇಚ್ಚರಿಕ ಕ್ರಮವಾಗಿ ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆಗೂ ಭದ್ರತೆ ಒದಗಿಸಲಾಗಿದೆ. ಡಿಸಿಪಿ ಆದೇಶದ ಮೇರೆಗೆ ಈಗಾಗಲೇ ಯಶ್ ಮನೆ ಮುಂದೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇಂದು ಬೆಳಗ್ಗಿನ ಜಾವ 3 ಗಂಟೆಗೆ ದುಷ್ಕರ್ಮಿಗಳು ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಅವರ ಮನೆ ಹಾಗೂ ಕಚೇರಿ ಮೇಲೆ ಕಲ್ಲು ತೂರಿದ್ದರು. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಕಲ್ಲು ತೂರಾಟ ನಡೆಸಿದ್ದ ವೇಳೆ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಮಾತ್ರ ಇದ್ದರು. ಹಾಗಾಗಿ ಸೆಕ್ಯೂರಿಟಿ ದೂರನ್ನು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಗ್ರಾಮದಲ್ಲಿ ಕಲ್ಲು ತೂರಾಟದದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್, “ಬೇಕಂತಲೇ ಉದ್ದೇಶ ಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನನ್ನ ಬೆಂಬಲಕ್ಕೆ ದರ್ಶನ್ ಹಾಗೂ ಯಶ್ ನಿಂತಿರುವುದು ನೋಡಿ ಹೆದರಿಕೊಂಡಿದ್ದಾರೆ. ಹಾಗಾಗಿ ಈ ರೀತಿ ಮಾಡಿದ್ದಾರೆ. ಈ ಮಟ್ಟಕ್ಕೆ ಮಾಡ್ತಿರೋ ರಾಜಕಾರಣ ಮನಸ್ಸಿಗೆ ನೋವು ತಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

One thought on “ಯಶ್ ಮನೆಗೆ ಪೊಲೀಸ್ ಭದ್ರತೆ

  1. ಅವರಿಗೆ ಯಾರ್ರೀ ಎದುರುತ್ತಾರ ಜೆಡಿಎಸ್ ಪಕ್ಷ ಹೋರಾಟ ಮಾಡಿಕೊಂಡೆ ಬಂದ ಪಕ್ಷ ಇನ್ನೂ ರಾಜಕೀಯದ ಮೆಟ್ಟಿಲು ಈಗ ತಾನೇ ಹತ್ತುತ್ತಿದ್ದೀರಾ ಅಹಂಕಾರದ ಮಾತುಗಳನ್ನು ಬಿಡಿ,ಕುಮಾರಣ್ಣನವರು ಶಾಂತ ರೀತಿಯಲ್ಲಿ ಇದ್ದಾರೆ, ಅವರಿಗೂ ರಾಜ್ಯಾದ್ಯಂತ ಅಭಿಮಾನಿ ಬಳಗ ಇದೆ,ಕಾರ್ಯಕರ್ತರ ಪಡೆಯೇ ಇದೆ.

Leave a Reply

Your email address will not be published. Required fields are marked *