Connect with us

Bengaluru City

ಶಂಕರ್ ನಾಗ್, ಧೋನಿ, ಮೋದಿಯವರು ನನಗೆ ಸ್ಫೂರ್ತಿ – ಯಶ್

Published

on

ಮುಂಬೈ: ಕನ್ನಡ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರು, ಕ್ರಿಕೆಟರ್ ಧೋನಿ ಅವರ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಸೋಮವಾರ ಸಂಜೆ ಮುಂಬೈನಲ್ಲಿ ನಡೆದ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ನಂತರ ಜಿಕ್ಯೂ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಮ್ಮ ಸಕ್ಸಸ್ ಮಂತ್ರ ಯಾವುದು ಎಂದು ಕೇಳಿದಾಗ, ನಾನು ನನಗೆ ಇಷ್ಟವಾದ ಕೆಲಸ ಮಾಡುತ್ತೇನೆ. ಆಗ ಅದು ಸಹಜವಾಗಿ ಬರುತ್ತದೆ ಅದೇ ನನ್ನ ಸಕ್ಸಸ್ ಮಂತ್ರ ಎಂದು ಹೇಳಿದ್ದಾರೆ.

ಇದರ ಜೊತೆಗೆ ನಿಮ್ಮ ರೋಲ್ ಮಾಡೆಲ್ ಯಾರು ಎಂದು ಕೇಳಿದಾಗ, ನನಗೆ ಹಲವರು ಜನ ರೋಲ್ ಮಾಡೆಲ್ ಗಳು ಇದ್ದಾರೆ ಎಂದು ಯಶ್ ಉತ್ತರಿಸಿದರು. ಈ ವೇಳೆ ಅವರ ಪೈಕಿ ಮೊದಲ ಮೂರು ಜನರನ್ನು ಹೇಳಿ ಎಂದಾಗ, ನನಗೆ ನಮ್ಮ ಕನ್ನಡದ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರ ಈಗ ಬದುಕಿಲ್ಲ ಆದರೆ ಅವರ ನನಗೆ ಮಾದರಿಯಾಗಿದ್ದಾರೆ. ಕ್ರಿಕೆಟರ್ ಎಂಎಸ್ ಧೋನಿ ಅವರು ಕೂಡ ನನಗೆ ಮಾದರಿ ಅವರ ವರ್ತನೆ ನನಗೆ ತುಂಬಾ ಇಷ್ಟ. ಹಾಗೇ ನೋಡಿದರೆ ನಮ್ಮ ಪ್ರಧಾನ ಮಂತ್ರಿಯವರು ಕೂಡ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ತಮ್ಮ ಮಂದಿನ ಯೋಜನೆಗಳ ಬಗ್ಗೆ ಕೇಳಿದಾಗ, ನಾನು ಭವಿಷ್ಯದ ಬಗ್ಗೆ ಹಲವು ಯೋಜನೆಗಳನ್ನು ಮಾಡಿದ್ದೇನೆ. ಮುಂದಿನ 10 ವರ್ಷಗಳಲ್ಲಿ ಮತ್ತಷ್ಟು ಪ್ರಬುದ್ಧತೆ ಪಡೆದುಕೊಂಡ ನಟನಾಗಿ ನನ್ನ ವೃತ್ತಿಯನ್ನು ಇಂದಿಗಿಂತಲೂ ಹೆಚ್ಚು ಒಳ್ಳೆಯ ರೀತಿಯಲ್ಲಿ ನಿರ್ವಹಿಸಬೇಕು ಎಂಬುದು ನನ್ನ ಭವಿಷ್ಯದ ಯೋಜನೆ. ಜೊತೆಗೆ ನನ್ನ ಕಡೆ ಉಸಿರಿರುವರೆಗೂ ನಟನಾಗಿ ಇರಬೇಕು ಎಂಬುದು ನನ್ನ ಆಸೆ. ಸದ್ಯ ಕೆಜಿಎಫ್-2 ಮಾಡುತ್ತಿದ್ದೇನೆ ನಂತರ ಮುಂದಿನ ಚಿತ್ರದ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಸೋಮವಾರ ಸಂಜೆ ಮುಂಬೈನಲ್ಲಿ ಜಿಕ್ಯೂ 50ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ ಅವರ ಯೋಚನೆಯನ್ನು ಪರಿಗಣಿಸಿ, ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳಿಗೆ ಜಿಕ್ಯೂ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿತು. ದಿ ಜಿಕ್ಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ 50 ಯುವ ಭಾರತೀಯರು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಈ ಕಾರ್ಯಕ್ರಮವನ್ನು ಮಾಡಿದೆ. 50 ಬೇರೆ ಬೇರೆ ಕ್ಷೇತ್ರಗಳಲ್ಲಿ ಆಯ್ಕೆಯಾದ ಯುವ ವ್ಯಕ್ತಿಗಳ ಸಾಲಲ್ಲಿ ಇಡೀ ಭಾರತೀಯ ಚಿತ್ರರಂಗದಿಂದ ಯಶ್ ಆಯ್ಕೆಯಾಗಿದ್ದರು.

ಈ ಬಗ್ಗೆ ಯಶ್ ಟ್ವೀಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರಿನಲ್ಲಿ ಯಶ್, “ಜಿಕ್ಯೂ ಇಂಡಿಯಾ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಖಷಿ ತಂದಿದೆ. ಚಿತ್ರರಂಗದಲ್ಲಿ ನಮ್ಮ ಸಾಧನೆಯನ್ನು ಗುರುತಿಸಿರುವುದಕ್ಕೆ ಧನ್ಯವಾದಗಳು. ನನಗೆ ನಿರಂತರವಾಗಿ ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಹಾಗೂ ನಮಗೆ ಆಶೀರ್ವಾದಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.