Saturday, 15th December 2018

Recent News

ಗರ್ಭಿಣಿ ರಾಧಿಕಾರ ಹೊಸ ಬಯಕೆ ಈಡೇರಿಸಿದ್ರು ರಾಕಿಂಗ್ ಸ್ಟಾರ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ, ನಟಿ ರಾಧಿಕಾ ಪಂಡಿತ್ ಅವರು ಬಸುರಿ ಬಯಕೆಯನ್ನು ಈಡೇರಿಸಿದ್ದಾರೆ.

ಯಶ್ ತಮ್ಮ ಪತ್ನಿಗಾಗಿ ಅಡುಗೆ ಮಾಡಿ ಕೊಡುವ ಮೂಲಕ ಪತ್ನಿಯ ಆಸೆಯನ್ನು ನೆರವೇರಿಸಿದ್ದಾರೆ. ಯಶ್ ಅಡುಗೆ ಮಾಡುತ್ತಿರುವ ಫೋಟೋವನ್ನು ಪತ್ನಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಯಶ್ ಅಡುಗೆ ಮಾಡುತ್ತಿರುವ ಫೋಟೋ ಹಾಕಿ ಅದಕ್ಕೆ, “ನನ್ನ ಪತಿ ಯಾವುದೇ ವಿಷಯದಲ್ಲೂ ಹಿಂದಿರಲು ಬಯಸುವುದಿಲ್ಲ. ಯಶ್ ನನಗಾಗಿ ಅಡುಗೆ ಮಾಡಿದ್ದಾರೆ. ಮಿ. ರಾಕಿಂಗ್ ಸ್ಟಾರ್ ನೀವು ಒಳ್ಳೆಯ ಶೆಫ್” ಎಂದು ಬರೆದು ರಾಧಿಕಾ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ರಾಧಿಕಾ ಅವರಿಗೆ ಅವರ ಗೆಳತಿಯರಾದ ಪ್ರತಿಭಾ ಸುರೇಶ್, ಸಾನಿಯಾ ಸರ್ದರಿಯಾ ಮತ್ತು ವನಿತಾ ಉಮೇಶ್ ಮೂವರು ಸರ್ಪ್ರೈಸ್ ನೀಡಿದ್ದರು. ಗರ್ಭಿಣಿಗೆ ಸಾಮಾನ್ಯವಾಗಿ ಬಗೆ ಬಗೆಯ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ.

ಹಾಗೆಯೇ ಗರ್ಭಿಣಿ ರಾಧಿಕಾ ಅವರ ಬಯಕೆಯನ್ನು ಅರಿತ ಗೆಳತಿಯರು ವಿವಿಧ ಭಕ್ಷ್ಯ, ಭೋಜನ ಸಿದ್ಧಪಡಿಸಿ ಅವರಿಗೆ ನೀಡಿದ್ದಾರೆ. ಗೆಳತಿಯರು ತನಗಾಗಿ ಸಿದ್ಧಪಡಿಸಿ ತಂದ ಆಹಾರ ಪದಾರ್ಥ ನೋಡಿದ ರಾಧಿಕಾ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.

ಫೋಟೋದಲ್ಲಿ ಮೂವರು ಗೆಳತಿಯರೊಂದಿಗೆ ರಾಧಿಕಾರ ತಾಯಿ ಮತ್ತು ಬಗೆಗೆ ತಿಂಡಿ, ಸಿಹಿ ಪದಾರ್ಥಗಳನ್ನು ಇತ್ತು. ನನ್ನ ಆಪ್ತ ಗೆಳತಿಯರು ನನಗಾಗಿ ಪ್ರೀತಿಯಿಂದ ಮಾಡಿಕೊಂಡು ಬಂದ ಅಡುಗೆ ಎಂಬ ಸಾಲುಗಳನ್ನು ಬರೆದು, ಮೂವರಿಗೂ ಟ್ಯಾಗ್ ಮಾಡಿದ್ದರು.

ಈ ಹಿಂದೆ ರಾಧಿಕಾ ಖುದ್ದು ತಾವೇ ಆಹಾರ ಸೇವಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. ನಂತರ ಬೇಬಿ ಮೂನ್ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ತಾವು ಗರ್ಭಿಣಿಯಾಗಿದ್ದರೂ, `ಆದಿ ಲಕ್ಷ್ಮಿ ಪುರಾಣ’ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *