Connect with us

Cinema

ಆಟೋ, ಹಸು ಗಿಫ್ಟ್ ನೀಡಿದ ರಾಬರ್ಟ್ ಅಭಿಮಾನಿಗಳು

Published

on

ತುಮಕೂರು: ರಾಬರ್ಟ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳಿಬ್ಬರಿಗೆ ತೂಗುದೀಪ ಅಭಿಮಾನಿಗಳ ಸಂಘದಿಂದ ವಿಭಿನ್ನವಾದ ಗಿಫ್ಟ್ ನೀಡಲಾಗಿದೆ.

ತುಮಕೂರು ಜಿಲ್ಲಾ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದಿಂದ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಅಭಿಮಾನಿಗಳಿಬ್ಬರಿಗೆ ಆಟೋ ಮತ್ತು ಸೀಮೆ ಹಸು ವಿತರಣೆ ಮಾಡಲಾಗಿದೆ. ಇಂದು ರಾಬರ್ಟ್ ಚಿತ್ರ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿ ಸಂಘಟನೆಯ ಅಭಿಮಾನಿ ಸದಸ್ಯರಿಗೆ ಉಡುಗೊರೆ ನೀಡಿದೆ.

ಬಡ ಆಟೋ ಚಾಲಕ ಶಿವು ಎಂಬುವರಿಗೆ ಆಟೋ ಹಾಗೂ ರೈತ ಕುಟುಂಬದ ಶಮಂತ್ ಎಂಬುವರಿಗೆ ಸೀಮೆ ಹಸು ಅವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ.

ರಾಬರ್ಟ್ ಹವಾ ಫುಲ್ ಜೋರಾಗಿದೆ. ಬಾಕ್ಸ್ ಅಫೀಸ್ ಸುಲ್ತಾನ್ ದರ್ಶನ್ ಅವರ ಸಿನಿಮಾವನ್ನು ನೋಡಲು ಚಿತ್ರಮಂದಿರಗಳಲ್ಲಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳ ಬಳಗ ಜಮಾಯಿಸಿದೆ. ಸಿನಿಮಾಕ್ಕೆ ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.

 

ಭಾರೀ ನೀರಿಕ್ಷೆ ಇರುವ ರಾಬರ್ಟ್ ಸಿನಿಮಾ ಅಭಿಮಾನಿಗಳ ನೀರಿಕ್ಷೆಗೂ ಮೀರಿದ ಮನರಂಜನೆಯನ್ನು ನೀಡುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಿನಿಮಾಕ್ಕೆ ಪಾಸಿಟಿವ್ ಮಿಮರ್ಶೆಗಳು ಬರುತ್ತಿದೆ.

Click to comment

Leave a Reply

Your email address will not be published. Required fields are marked *