Connect with us

ರಾಬರ್ಟ್ ಚಿತ್ರದ ಹಾಡನ್ನು ಡೊಳ್ಳು ಪದದಲ್ಲಿ ಹಾಡಿದ ಕಲಾವಿದನಿಗೆ ಬಹುಪರಾಕ್

ರಾಬರ್ಟ್ ಚಿತ್ರದ ಹಾಡನ್ನು ಡೊಳ್ಳು ಪದದಲ್ಲಿ ಹಾಡಿದ ಕಲಾವಿದನಿಗೆ ಬಹುಪರಾಕ್

ಚಿಕ್ಕೋಡಿ: ರಾಬರ್ಟ್ ಕನ್ನಡ ಸಿನಿಮಾದ ತೆಲಗು ಅವತರಣಿಕೆಯ ಕಣ್ಣೆ ಅದಿರಿಂದಿ ಹಾಡನ್ನು ಡೊಳ್ಳಿನ ಪದದಲ್ಲಿ ಹಾಡಿದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನೀಲಜಿ ಗ್ರಾಮದ ಸಂತೋಷ ನಿವರ್ಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕರ್ನಾಟಕ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ 200 ರಿಂದ 300 ಡೊಳ್ಳಿನ ಹಾಡು ಕಾರ್ಯಕ್ರಮಗಳನ್ನು ನೀಡಿ ಚಿರಪರಿಚಿತರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಶಿವರಾತ್ರಿ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಲೆಟೆಸ್ಟ್ ಸಾಂಗ್ ಹಾಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ತೆಲುಗಿನ ಮಂಗ್ಲಿ ಹಾಡಿದ ರಾಬರ್ಟ್ ಚಲನಚಿತ್ರದ ಹಾಡಿನ ಕೆಲವು ಸಾಲುಗಳನ್ನು ಹಾಡುವ ಮೂಲಕವಾಗಿ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ.

ಮಂಗ್ಲಿ ಗಾಯನವನ್ನು ಮೆಚ್ಚಿದ್ದ ಜನ ಇದೀಗ ಸಂತೋಷ ನಿವರ್ಗಿ ಡೊಳ್ಳಿನ ಹಾಡಿನ ಶೈಲಿಯಲ್ಲಿ ಹಾಡಿರುವುದನ್ನು ಮೆಚ್ಚಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಲಕ್ಷಾಂತರ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಹಾಡಿದ ಕೆಲವು ಸಾಲುಗಳು ಹಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟೊಂದು ಪ್ರಸಿದ್ಧಿ ಸಿಕ್ಕಿದ್ದು ತುಂಬಾ ಖುಷಿ ತಂದಿದೆ. ಪ್ರೋತ್ಸಾಹಿಸಿದ ಅಭಿಮಾನಿ ಹಾಗೂ ವೀಕ್ಷಕ ಬಂಧುಗಳಿಗೆ ಧನ್ಯವಾದ ಎಂದು ಸಂತೋಷ ನಿವರ್ಗಿ ಹೇಳಿದ್ದಾರೆ.

Advertisement
Advertisement