Connect with us

Crime

ಹಣದ ಆಸೆಗಾಗಿ ಕಿವಿ, ಮೂಗು ಕತ್ತರಿಸಿ ಬಾಲಕನ ಹತ್ಯೆ

Published

on

ಜೈಪುರ: ಕಿವಿ, ಮೂಗು ಕತ್ತರಿಸಿದ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವ ರಾಜಸ್ಥಾನದ ಅಲ್ವಾರ್ ಗ್ರಾಮದಲ್ಲಿ ಪತ್ತೆಯಾಗಿದೆ.

11 ವರ್ಷದ ಬಾಲಕ ಶನಿವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕಾಣೆಯಾದವನು ಇಂದು ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ ತಂದೆ ಈ ಪ್ರಕರಣದಲ್ಲಿ ಕೆಲವು ಜನರ ಹೆಸರನ್ನು ಹೇಳಿದ್ದಾರೆ. ಇವರು ಹಣದ ದುರಾಸೆಗಾಗಿ ನಮ್ಮ ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದು ದಿನದ ಹಿಂದೆ ಅಲ್ವಾರ್ ಗ್ರಾಮದಿಂದ ಬಾಲಕ ನಾಪತ್ತೆಯಾಗಿದ್ದನು. ಆದರೆ ಇದೀಗ ವಿಕೃತವಾಗಿ ಕೊಂದಿರುವ ಅವನ ಮೃತ ದೇಹ ಪತ್ತೆಯಾಗಿದೆ. ಕಣ್ಣು, ಮೂಗು ಕತ್ತರಿಸಿ ಬಾಲಕನನ್ನು ಕೊಂದು ಹಾಕಿದ್ದಾರೆ. ಬಾಲಕನ ಶವ ಗದ್ದೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಅಲ್ವಾರ್‍ನ ಮಲಖೇಡಾ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.

 

 

ನಂದಾ, ಬದ್ರಿ ಸೊಮೆಟೊ, ಬಾಲಸಹೈ, ಜೀತು ಮತ್ತು ಕಲ್ಲು ಇವರು ಹಣದ ದುರಾಸೆಯಿಂದ ನಿನ್ನೆ ಬೆಳಿಗ್ಗೆ ಮಗುವನ್ನು ಅಪಹರಿಸಿದ್ದಾರೆ. ನನ್ನ ಮಗನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಹಣದ ದುರಾಸೆಯಿಂದ ಅವನು ಕೊಂದಿದ್ದಾರೆ. ಮಗ ಕಾಣದೇ ಇರುವುದನ್ನು ಗಮನಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆದರೆ ಪೊಲೀಸರು ಹೆಚ್ಚಿನ ಗಮನವನ್ನು ಕೊಟ್ಟಿರಲಿಲ್ಲ ಎಂದು ಬಾಲಕನ ತಂದೆ ರಘುವೀರ್ ಸಿಂಗ್ ಹೇಳಿದ್ದಾರೆ.

ಹತ್ಯೆಗೀಡಾದ ಮಗುವಿನ ಶವವನ್ನು ನವಲಿ ಗ್ರಾಮದ ಹೊಲದಲ್ಲಿ ಪತ್ತೆ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ತೇಜಸ್ವಿನಿ ಗೌತಮ್ ಹೇಳಿದರು.

Click to comment

Leave a Reply

Your email address will not be published. Required fields are marked *