Saturday, 14th December 2019

ವಿಶ್ವಕಪ್ ಟೂರ್ನಿಗೆ ರಿಷಬ್ ಪಂತ್ ಪಾದಾರ್ಪಣೆ – ಹೀಗಿದೆ ಅಭಿಮಾನಿಗಳ ರಿಯಾಕ್ಷನ್

ಲಂಡನ್: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ವಿಶ್ವಕಪ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ.

ಟೂರ್ನಿಯ ಕಳೆದ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ವಿಜಯ್ ಶಂಕರ್ ಅವರಿಗೆ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕೊಕ್ ನೀಡಲಾಗಿದ್ದು, 21 ವರ್ಷದ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಲಾಗಿದೆ. ಶಂಕರ್ ಕಳೆದ ಎರಡು ಪಂದ್ಯಗಳಲ್ಲಿ 58 ರನ್ ಗಳಿಸಿ, 2 ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾ ಪರ ಕೇವಲ 5 ಏಕದಿನ ಪಂದ್ಯಗಳನ್ನು ಆಡಿರುವ ರಿಷಬ್ 93 ರನ್ ಗಳಿಸಿದ್ದಾರೆ.

ಶಿಖರ್ ಧವನ್ ಗಾಯಗೊಂಡ ಬಳಿಕ ತಂಡಕ್ಕೆ ಸೇರ್ಪಡೆಯಾಗಿದ್ದ ರಿಷಬ್ ಪಂತ್ ಅವರಿಗೆ ವಿಶ್ವಕಪ್ ನಲ್ಲಿ ದೊರೆತ ಮೊದಲ ಅವಕಾಶ ಇದಾಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಕಳೆದ ಬಾರಿ ಇಂಗ್ಲೆಂಡ್ ಟೂರ್ನಿಯಲ್ಲಿ ಭಾಗವಹಿಸಿದ್ದ ರಿಷಬ್, ಉತ್ತಮ ಪ್ರದರ್ಶನ ನೀಡಿ ಆಯ್ಕೆ ಸಮಿತಿ ಗಮನ ಸೆಳೆದಿದ್ದರು. ಸದ್ಯ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಿರುವುದರಿಂದ ದಿನೇಶ್ ಕಾರ್ತಿಕ್ ಅವಕಾಶ ವಂಚಿತರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ರಿಷಬ್ ಪಂತ್ ಅವಕಾಶ ನೀಡಲು ಹಲವು ಹಿರಿಯ ಆಟಗಾರರು ಸಲಹೆ ನೀಡಿದ್ದರು. ಆ ಮೂಲಕ ರಿಷಬ್ ಪಂತ್ ಪರ ಬ್ಯಾಟ್ ಬೀಸಿದ್ದರು. ಇಂಗ್ಲೆಂಡ್ ವಾತಾವರಣದಲ್ಲಿ ಆಡಲು ರಿಷಬ್ ಪಂತ್ ಸೂಕ್ತ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಇತ್ತ ಆಯ್ಕೆ ಸಮಿತಿ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಿರುವುದಕ್ಕೆ ಹಲವು ಮಂದಿ ವಿವಿಧ ರೀತಿಯ ಮಿಮ್ಸ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಕೆಲವರು ದಿನೇಶ್ ಕಾರ್ತಿಕ್ ಪರ ಬ್ಯಾಟ್ ಬೀಸಿದ್ದರೆ, ಮತ್ತೆ ಕೆಲವರು ಆಯ್ಕೆ ಸಮಿತಿಯ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *