Connect with us

Davanagere

ನನ್ನ ನಿಸ್ವಾರ್ಥ ಸೇವೆಯನ್ನು ಕಂಡು ಕಾಂಗ್ರೆಸ್‍ನಿಂದ ವಿಕೃತಿ ಪ್ರದರ್ಶನ – ರೇಣುಕಾಚಾರ್ಯ

Published

on

Share this

ದಾವಣಗೆರೆ: ಹೊನ್ನಾಳಿಯ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ ನಡೆಸಿದ್ದಕ್ಕೆ ಟೀಕೆ ವ್ಯಕ್ತವಾದ ಹಿನ್ನೆಲೆ, ನಾನು ಸಲ್ಲಿಸುತ್ತಿರುವ ನಿರಂತರ ನಿಸ್ವಾರ್ಥ ಸೇವೆಯನ್ನು ಕಂಡು ಕಾಂಗ್ರೆಸ್ ಮುಖಂಡರು ಸಹಿಸಲಾಗದೆ ವಿಕೃತಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ನಾನೊಬ್ಬ ಜನಸೇವಕನಾಗಿ ನಮ್ಮ ಕ್ಷೇತ್ರದಲ್ಲಿ ನಮ್ಮ ಬಂಧುಗಳ ರಕ್ಷಣೆಗಾಗಿ ನಾನು ಸಲ್ಲಿಸುತ್ತಿರುವ ನಿರಂತರ ನಿಸ್ವಾರ್ಥ ಸೇವೆಯನ್ನು ಈ ರೀತಿ ಬಣ್ಣಿಸುತ್ತಿದ್ದಾರೆ. ನಾಟಕ, ದೊಂಬರಾಟ, ಕಾಮಿಡಿ ಪೀಸ್, ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಅಪ ಪ್ರಚಾರ ಮಾಡಿದ್ದಾರೆ.  ಇದನ್ನೂ ಓದಿ: ರೇಣುಕಾಚಾರ್ಯರನ್ನ ಪತಿಯಾಗಿ ಪಡೆದ ನಾನೇ ಅದೃಷ್ಟವಂತೆ: ಕೊಂಡಾಡಿದ ಪತ್ನಿ ಸುಮಿತ್ರಾ

ಕೋವಿಡ್ ಸೋಂಕಿತ ಶವ ಸಂಸ್ಕಾರ ಮಾಡಿದ್ದಕ್ಕೆ ಟೀಕೆ ವ್ಯಕ್ತ ಪಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ವಿಕೃತಿ. ಪ್ರತಿದಿನ ಕೋವಿಡ್ ವಾರ್ಡ್‍ನ ಪ್ರತಿ ಬೆಡ್ ಗೆ ಭೇಟಿ ನೀಡಿ ನನ್ನ ಬಂಧುಗಳಿಗೆ ಆತ್ಮಸ್ಥೈರ್ಯ ತುಂಬಿದ್ದಕ್ಕೆ ಟೀಕೆ, ಜನರ ಆರೋಗ್ಯ ವೃದ್ಧಿಗಾಗಿ ಹೋಮ ಮಾಡಿಸಿದ್ದಕ್ಕೆ ಹಾಗೂ ಹೋಳಿಗೆ ಊಟದ ಬಗ್ಗೆ ಟೀಕೆ, ಪ್ರತಿದಿನ ನಾನು ವೈಯಕ್ತಿಕವಾಗಿ ನೀಡುತ್ತಿರುವ ಉಪಹಾರದ ಬಗ್ಗೆ ಟೀಕೆ, ಕೋವಿಡ್ ಸೋಂಕಿತರಿಗೆ ಯೋಗಾ ಹಾಗೂ ಮನರಂಜನೆ ಬಗ್ಗೆ ಟೀಕೆ ಮಾಡಿದ್ದಾರೆ.

ಸಿಸಿಸಿ ವಾಸ್ತವ್ಯದ ಬಗ್ಗೆ ಹಗುರ ಮಾತುಗಳು ಕೇಳಿಬಂದಿರುವುದು ನನ್ನ ಗಮನಕ್ಕೆ ಬಂದಿದೆ. ಇದರಿಂದ ವೈಯಕ್ತಿಕ ತೇಜೋವಧೆ ಆಗುತ್ತಿದೆ. ಹೀಗೆ ನನ್ನ ಬಗ್ಗೆ ಕ್ಷೇತ್ರದ ಮಾಜಿ ಶಾಸಕರು ಹಾಗೂ ಅವರ ಪಕ್ಷದ ಮುಖಂಡರು ಕೀಳು ಮಟ್ಟದಲ್ಲಿ ಟೀಕಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದು ನಿಮ್ಮ ಕೀಳು ಮಟ್ಟದ ರಾಜಕೀಯ ಮನಸ್ಥಿತಿಯನ್ನು ತೋರಿಸುತ್ತದೆ. ಇದು ರಾಜಕೀಯ ಮಾಡುವ ಸಮಯವಲ್ಲ ಮಾನವೀಯತೆ ಮೆರೆಯುವ ಸಮಯ ಎಂದು ಬರೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement