Connect with us

Crime

ಬಾಡಿಗೆ ಕಾರು ಮಾರಾಟ -2 ವರ್ಷದ ಬಳಿಕ ವಂಚಕ ಪೊಲೀಸರ ಬಲೆಗೆ

Published

on

Share this

ಹಾವೇರಿ: ಬಾಡಿಗೆಗೆ ತೆಗೆದುಕೊಂಡಿದ್ದ ಕಾರು ಮಾರಾಟ ಮಾಡಿದ ವ್ಯಕ್ತಿ, 2 ವರ್ಷದ ನಂತರ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಲೋಕೇಶ್ ದೇವಗಿರಿ ಬಂಧಿತ ಆರೋಪಿಯಾಗಿದ್ದಾನೆ. ಈತ ಹಾನಗಲ್ ಪಟ್ಟಣದ ಕುಮಾರೇಶ್ವರ ನಗರದ ನಿವಾಸಿಯಾಗಿದ್ದಾನೆ. ಈತನಿಗೆ ವೀರಣ್ಣ ಅವರು ಬರೋಬ್ಬರಿ ಎರಡು ವರ್ಷಗಳ ಹಿಂದೆ ತಿಂಗಳ ಬಾಡಿಗೆ ಕಾರನ್ನು ನೀಡಿದ್ದರು. ಅಡ್ವಾನ್ಸ್ ಆಗಿ ಸ್ವಲ್ಪ ಹಣವನ್ನು ನೀಡಿ ಕಾರು ತೆಗೆದುಕೊಂಡು ಹೋಗಿದ್ದ ಆಸಾಮಿ, ಎರಡು ವರ್ಷಗಳ ಕಾಲ ಬಾಡಿಗೆಯನ್ನೂ ಕೊಡದೆ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿದ್ದ. ಕೊನೆಗೆ ಎರಡು ವರ್ಷಗಳ ನಂತರ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದನ್ನೂ ಓದಿ: ರಾಜೀನಾಮೆ ನೀಡುವ ಪ್ರಶ್ನೆ ಇಲ್ಲವೇ ಇಲ್ಲ: ಸಿಎಂ ಯಡಿಯೂರಪ್ಪ

ವೀರಣ್ಣ ಅವರ ಸ್ವಿಫ್ಟ್ ಕಾರನ್ನು ತಿಂಗಳ ಬಾಡಿಗೆಗೆ ಲೋಕೇಶ್ ತೆಗೆದುಕೊಂಡಿದ್ದ. ತಿಂಗಳಿಗೆ 19.301 ರೂಪಾಯಿ ನೀಡುವುದಾಗಿ ಕರಾರು ಮಾಡಿ ಮುಂಗಡ ಹಣವಾಗಿ ಹದಿನೈದು ಸಾವಿರ ರೂಪಾಯಿ ನೀಡಿದ್ದನು. 2019ರ ಮೇ 21ರಂದು ಬಾಡಿಗೆಗೆಂದು ಕಾರ್ ತೆಗೆದುಕೊಂಡು ಹೋಗಿದ್ದನು. ಹೀಗೆ ಹೋದ ಕಾರು ಎರಡು ವರ್ಷಗಳು ಕಳೆದರೂ ಮರಳಿ ಮಾಲೀಕ ವೀರಣ್ಣ ಅವರಿಗೆ ಸಿಕ್ಕಿರಲಿಲ್ಲ. ಕಾರಿನ ಬಾಡಿಗೆಯೂ ಇಲ್ಲ, ಕಾರು ಇಲ್ಲದಂತಾಗಿ ಕಾರಿನ ಮಾಲೀಕ ಅಕ್ಷರಶಃ ಕಂಗಾಲಾಗಿದ್ದರು. ಇದನ್ನೂ ಓದಿ: ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

ವೀರಣ್ಣ ಎಂಬವರಿಂದ ತಿಂಗಳ ಬಾಡಿಗೆ ರೂಪದಲ್ಲಿ ಕಾರು ಪಡೆದುಕೊಂಡಿದ್ದ ಲೋಕೇಶ್ ಎಂಬಾತ ಸ್ವಲ್ಪ ದಿನಗಳ ನಂತರ ಕಾರನ್ನು ಬಾಗಲಕೋಟೆಯ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದನು. ಇತ್ತ ಕಾರು ಬಾಡಿಗೆಗೆ ನೀಡಿದ್ದ ವೀರಣ್ಣ, ಕಾರೂ ಇಲ್ಲದೆ, ಕಾರಿನ ಬಾಡಿಗೆ ಹಣವೂ ಇಲ್ಲದೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಾಡಿಗೆಗೆಂದು ಕಾರು ಒಯ್ದು ಮತ್ತೊಬ್ಬರಿಗೆ ಮಾರಾಟ ಮಾಡಿದ್ದ ಲೋಕೇಶ್ ಕಾರಿನ ಮಾಲೀಕ ವೀರಣ್ಣನಿಗೆ ಮೋಸ ಮಾಡಿ ಬಿಂದಾಸ್ ಆಗಿ ತಿರುಗಾಡಿಕೊಂಡಿದ್ದನು. ಇದನ್ನೂ ಓದಿ:  ಮಕ್ಕಳಿಗೆ ಇಷ್ಟವಾಗುವ ಕಡಲೆ ಸಲಾಡ್ ಮಾಡಿ

ತಿಂಗಳ ಬಾಡಿಗೆ ರೂಪದಲ್ಲಿ ಕಾರು ತೆಗೆದುಕೊಂಡು ಹೋಗಿದ್ದ ಆಸಾಮಿ ಲೋಕೇಶ್, ಕಾರಿನ ಮಾಲೀಕನಿಗೆ ಬಾಡಿಗೆ ಹಣವನ್ನೂ ಕೊಡದೆ, ಕಾರನ್ನೂ ಮರಳಿಸದೆ ಓಡಾಡಿಕೊಂಡಿದ್ದನು. ಇದರಿಂದ ಕಂಗಾಲಾಗಿದ್ದ ಕಾರು ಮಾಲೀಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಹಾನಗಲ್ ಠಾಣೆ ಪೊಲೀಸರು ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಂಚಕನನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು- ವೀಡಿಯೋ ವೈರಲ್

ವಂಚಕ ಲೋಕೇಶ್ ಕಾರನ್ನು ಬಾಗಲಕೋಟೆಯ ನವನಗರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ವಂಚಕ ಲೋಕೇಶ್‍ನನ್ನು ಬಂಧಿಸಿ ಆರು ಲಕ್ಷ ರೂಪಾಯಿ ಮೌಲ್ಯದ ಸ್ವಿಫ್ಟ್ ಕಾರನ್ನು ಜಪ್ತಿ ಮಾಡಿದ್ದಾರೆ. ಎರಡು ವರ್ಷಗಳ ಹಳೆಯ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಹಾನಗಲ್ ಪೊಲೀಸರ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement