Connect with us

Latest

ಗುಜರಾತಿನಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ಮುಂದಾದ ರಿಲಯನ್ಸ್‌

Published

on

ನವದೆಹಲಿ: ಗುಜರಾತಿನ ಜಾಮ್‌ನಗರದಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಂದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗೆ ಅನುಮತಿ ನೀಡಿದ್ದು 280 ಎಕ್ರೆ ಭೂಮಿಯಲ್ಲಿ ಮೃಗಾಲಯ ನಿರ್ಮಾಣವಾಗಲಿದೆ. ಕೋವಿಡ್‌ 19 ಹಿನ್ನೆಲೆಯಲ್ಲಿ ಈ ಯೋಜನೆ ಆರಂಭ ತಡವಾಗಿದ್ದು 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ.

ಆರ್‌ಐಎಲ್‌ನ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಪರ್ಮಿಲ್ ನಾಥ್ವಾನಿ ಪ್ರತಿಕ್ರಿಯಿಸಿ, ನಾವು ಈ ಯೋಜನೆಯ ಕೆಲಸಗಳನ್ನು ಪ್ರಾರಂಭಿಸಿದ್ದೇವೆ. ಈ ಮೃಗಾಲಯವು ವಿಶ್ವದ ಅತಿದೊಡ್ಡ ಮೃಗಾಲಯವಾಗಲಿದೆ. ಸಿಂಗಾಪುರದಲ್ಲಿ ಇರುವ ಮೃಗಾಲಯಕ್ಕಿಂತಲೂ ಈ ಮೃಗಾಲಯ ದೊಡ್ಡದಿರಲಿದೆ ಎಂದು ಹೇಳಿದ್ದಾರೆ.

 

ಜಾಮ್‌ ನಗರದಲ್ಲಿ ಈಗಾಗಲೇ ರಿಲಯನ್ಸ್‌ ತೈಲ ಸಂಸ್ಕರಣ ಘಟಕವಿದೆ. ಈ ಘಟಕದ ಸಮೀಪ ಇರುವ ಮೋತಿ ಖಾವ್ಡಿ ಎಂಬಲ್ಲಿ ಈ ಮೃಗಾಲಯ ನಿರ್ಮಾಣವಾಗಲಿದೆ.

ಪ್ರವಾಸೋದ್ಯಮದ ಮೂಲಕ ಅದಾಯ ಮತ್ತು ಉದ್ಯೋಗವಕಾಶ ಸೃಷ್ಟಿಗೆ ಗುಜರಾತ್‌ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ ನಿರ್ಮಾಣವಾಗಿದೆ. ಈಗ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

Click to comment

Leave a Reply

Your email address will not be published. Required fields are marked *

www.publictv.in