ಬಿಗ್-ಬಿ ಫೋಟೋ ನೋಡಿ ನಿಂತ ಜಾಗ ಖಾಲಿ ಮಾಡಿದ ರೇಖಾ- ವಿಡಿಯೋ ವೈರಲ್

ಮುಂಬೈ: ಬಾಲಿವುಡ್ ಹಿರಿಯ ನಟಿ ರೇಖಾ ಕಾರ್ಯಕ್ರಮವೊಂದರಲ್ಲಿ ಫೋಟೋಗೆ ಪೋಸ್ ನೀಡುವಾಗ ತನ್ನ ಹಿಂದೆ ಇದ್ದ ಬಿಗ್-ಬಿ ಅಮಿತಾಬ್ ಬಚ್ಚನ್ ಫೋಟೋ ನೋಡಿ ನಿಂತ ಜಾಗವನ್ನು ಖಾಲಿ ಮಾಡಿದ್ದಾರೆ.

ಸೆಲೆಬ್ರಿಟಿ ಫೋಟೋಗ್ರಾಫರ್ ದಾಬೂ ರತ್ನಾನಿ ಇತ್ತೀಚೆಗೆ ಕ್ಯಾಲೆಂಡರ್ ಲಾಂಚ್ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ರೇಖಾ ಅವರು ಕಾಂಚಿಪುರಂ ರೇಷ್ಮೆ ಸೀರೆ ಬದಲು ಕಪ್ಪು ಬಣ್ಣದ ಔಟ್‍ಫಿಟ್‍ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ರೇಖಾ ಅವರು ಕಾರ್ಯಕ್ರಮಕ್ಕೆ ಬಂದು ಅಲ್ಲಿ ಫೋಟೋಗ್ರಾಫರ್ ಗಳಿಗೆ ಪೋಸ್ ನೀಡುತ್ತಿದ್ದರು. ಫೋಟೋಗೆ ಪೋಸ್ ನೀಡುವಾಗ ರೇಖಾ ತಮ್ಮ ಹಿಂದೆ ಇದ್ದ ಗೋಡೆಯನ್ನು ತಿರುಗಿನೋಡಿದ್ದಾರೆ. ಈ ವೇಳೆ ಅಲ್ಲಿ ಅಮಿತಾಬ್ ಬಚ್ಚನ್ ಫೋಟೋ ಇರುವುದನ್ನು ನೋಡಿ ಅಲ್ಲಿಂದ ಜಾಗ ಖಾಲಿ ಮಾಡಿ ಬೇರೆ ಕಡೆ ನಿಂತಿದ್ದಾರೆ.

ರೇಖಾ ಅವರು ಬಿಗ್-ಬಿ ಫೋಟೋ ನೋಡಿ ಓಡಿ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕಾರ್ಯಾಕ್ರಮದಲ್ಲಿ ನಟ ಟೈಗರ್ ಶ್ರಾಫ್, ಕಾರ್ತಿಕ್ ಆರ್ಯನ್, ನಟಿಯರಾದ ವಿದ್ಯಾ ಬಾಲನ್, ಟ್ವಿಂಕಲ್ ಖನ್ನಾ, ಕೃತಿ ಸನೋನ್, ಕೈರಾ ಅಡ್ವಾನಿ, ಸನ್ನಿ ಲಿಯೋನ್ ಹಾಗೂ ಅಂಕಿತಾ ಲೋಕಂಡೆ ಹಲವರು ಭಾಗಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *