Saturday, 15th December 2018

ರಿಯಲ್ ಎಸ್ಟೇಟ್ ಉದ್ಯಮಿ ಮಿರ್ಲೆ ವರದರಾಜನ್ ಬಂಧನ

ಬೆಂಗಳೂರು: ಅಮಾಯಕರನ್ನು ಬೆದರಿಸಿ ಭೂಮಿ ಕಬಳಿಸ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮಿರ್ಲೆ ವರದರಾಜನ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ಬಳಿಯ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸ್ರು, ರೌಡಿ ಲಕ್ಷ್ಮಣನ ಹಾಗೂ ಡಿಪೋ ನಾಗರಾಜ್ ಸಹಾಯದಿಂದ ಗೂಂಡಾಗಿರಿ ನಡೆಸ್ತಿದ್ದ ಮಿರ್ಲೇ ವರದರಾಜ್‍ನನ್ನು ಲ್ಯಾಂಡ್ ಗ್ರಾಬಿಂಗ್ ಆಕ್ಟ್ ಅಡಿ ಬಂಧಿಸಿದ್ದಾರೆ.

ವರದರಾಜ್ ಜೊತೆಗೆ ಡಿಪೊ ನಾಗ ಕೂಡ ಅರೆಸ್ಟ್ ಆಗಿದ್ದಾನೆ. ಇದೇ ವೇಳೆ 500 ಕ್ಕೂ ಹೆಚ್ಚು ಕೋಟಿ ಬೆಲೆ ಬಾಳು ಆಸ್ತಿ ಪತ್ರಗಳು ವಶಕ್ಕೆ ಪಡೆಸಿದ್ದಾರೆ. ಮನೆಯ ಎರಡು ಬೀರುಗಳಲ್ಲಿ ಪತ್ತೆಯಾದ ಭೂ ದಾಖಲೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟಾಟಾ ಏಸ್ ವಾಹನದಲ್ಲಿ ಈ ಪೇಪರ್‍ಗಳನ್ನ ಸಾಗಿಸಿದ್ದಾರೆ. ಅಲ್ಲದೇ, ವರದರಾಜ್ ಗೆ ಸೇರಿದ ಮೂರು ಕಾರುಗಳಾದ ಐಶಾರಾಮಿ ಮರ್ಸಿಡಿ ಎಕ್ಸ್ ಯುವಿ ಕಾ , ಇನೋವಾ ಕಾರ್ ಹಾಗು ಒಂದು ಸ್ಕೋಡಾವನ್ನು ಸೀಜ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *