Wednesday, 19th February 2020

Recent News

ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ: ರಜಿನಿಕಾಂತ್

ಚೆನ್ನೈ: ತಮಿಳುನಾಡು ರಾಜಕೀಯ ಇನ್ನು ಮೇಲೆ ಮತ್ತಷ್ಟು ರಂಗೇರಲಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಮುಂದಿನ ವಿಧಾನಸಭೆಯಲ್ಲಿ ಸ್ಪರ್ಧಿಸೋದಾಗಿ ಘೋಷಿಸಿದ್ದಾರೆ.

ಈ ಬಾರಿಯ ಲೋಕಸಭೆಗೆ ರಜಿನಿಕಾಂತ್ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಅಲ್ಲದೇ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಅಥವಾ ಹೊಸ ಪಕ್ಷ `ರಜಿನಿ ಮಕ್ಕಳ ಮಂದ್ರಂ’ ನಿಂದಲೇ ಸ್ಪರ್ಧಿಸಿ ಆಮೇಲೆ ಬಿಜೆಪಿ ಜೊತೆ ಹೋಗುತ್ತಾರೆ ಎಂಬ ಸುದ್ದಿ ಜೋರಾಗಿ ಕೇಳಿ ಬಂದಿತ್ತು. ಆದರೆ, ಎಲ್ಲವನ್ನು ರಜಿನಿಕಾಂತ್ ಹುಸಿಗೊಳಿಸಿದ್ದರು. ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಪ್ರಕಟಿಸೋದಾಗಿ ಹೇಳಿದ್ದರು.

ಇಂದು ಚೆನ್ನೈನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಚುನಾವಣೆ ಯಾವಾಗ ಘೋಷಣೆಯಾದರೂ ತಾವು ಸ್ಪರ್ಧಿಸೋಕೆ ಸಿದ್ಧ. ಅಭಿಮಾನಿಗಳಿಗೆ ಇನ್ನು ನಿರಾಸೆ ಮಾಡಲ್ಲ ಎಂದು ತಿಳಿಸಿದರು.

ತಮಿಳುನಾಡಿನ 18 ಕ್ಷೇತ್ರಗಳಿಗೆ ಏಪ್ರಿಲ್ 18ರಂದು ಬೈ ಎಲೆಕ್ಷನ್ ನಡೆದಿದ್ದು, ಮೇ 23ಕ್ಕೆ ಫಲಿತಾಂಶ ಬರಲಿದೆ. ಈ ಬಳಿಕ ಪಳನಿಸ್ವಾಮಿ ಸರ್ಕಾರಕ್ಕೆ ಸಂಕಟ ಎದುರಾಗಿ ವಿಧಾನಸಭೆ ಏನಾದರೂ ವಿಸರ್ಜನೆಯಾದರೆ ತಮಿಳುನಾಡಿನಲ್ಲಿ ಈ ವರ್ಷಾಂತ್ಯಕ್ಕೆ ಎಲೆಕ್ಷನ್ ನಡೆಯಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ತಮಿಳುನಾಡು ವಿಧಾನಸಭೆ 234 ಸ್ಥಾನಗಳನ್ನು ಹೊಂದಿದ್ದು, ಕೆ. ಪಳನಿಸ್ವಾಮಿ ಸರ್ಕಾರ 113 ಶಾಸಕರ ಬಲವನ್ನು ಹೊಂದಿದೆ. ಫಲಿತಾಂಶ ಘೋಷಣೆ ಆದ ಬಳಿಕ ಪಳನಿಸ್ವಾಮಿ ಸರ್ಕಾರ 117 ಸ್ಥಾನಗಳ ಬಹುಮತ ಸಾಬೀತು ಪಡಿಸಬೇಕಿದೆ. ಎಲ್ಲರ ಚಿತ್ತ ಸದ್ಯ ಉಪ ಚುನಾವಣೆಯ ಫಲಿತಾಂಶದ ಮೇಲಿದೆ. ಒಂದೊಮ್ಮೆ ಸರ್ಕಾರ ಬಹುಮತ ಸಾಬೀತು ಪಡಿಸಿದರೆ 2021ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *