Monday, 17th June 2019

Recent News

ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಹೋಗೋರೇ ಹುಷಾರ್- ಪ್ರವಾಸಿಗರ ಮೇಲೆ ಡ್ರೈವರ್ ದರ್ಬಾರ್..!

ಬೆಂಗಳೂರು: ಹಾಲಿಡೇಸ್‍ನಲ್ಲಿ ಕುಟುಂಬದವರ, ಸ್ನೇಹಿತರ ಜೊತೆ ಹೊರ ರಾಜ್ಯದ ಪ್ರವಾಸಿ ತಾಣಗಳಿಗೆ ಹೋಗಲು ಇಷ್ಟಪಡುತ್ತಾರೆ. ಆದರೆ ಹೊರ ರಾಜ್ಯಗಳಲ್ಲಿ ಪ್ರವಾಸಿಗರ ಮೇಲೆ ಡ್ರೈವರ್‍ಗಳು ದರ್ಬಾರ್ ಮಾಡುತ್ತಿದ್ದಾರೆ.

ಹೌದು. ಬೆಂಗಳೂರಿನ ಬಸವನಗುಡಿ ಹಾಗೂ ಲಗ್ಗರೆಯ ಮಂದಿ ಕಳೆದ ವಾರ ಶಿರಡಿ ಸಾಯಿಬಾಬಾನ ದರ್ಶನಕ್ಕೆ ಎಂದು ಟ್ರೈನ್ ಮೂಲಕ ಹೋಗಿದ್ದಾರೆ. ಸಾಯಿಬಾಬಾನ ದರ್ಶನವಾದ ಮೇಲೆ ಸುತ್ತಮುತ್ತಲಿನ ದೇವಾಲಯಗಳನ್ನು ನೋಡಲು ಕರ್ನಾಟಕ ಭವನದ ಮುಂದೆ ಇದ್ದ ಟ್ರಾವಲ್ಸ್ ನಿಂದ 6 ಸಾವಿರ ರೂಪಾಯಿ ಕೊಟ್ಟು ಟಿಟಿ ಮಾಡಿಕೊಂಡಿದ್ದಾರೆ. ಆದರೆ ಟಿಟಿ ಡ್ರೈವರ್ ಮಾತ್ರ ನಾನು ನಿಲ್ಲಿಸಿದ ಕಡೆ ಊಟ, ತಿಂಡಿ ಮಾಡಬೇಕು ಎಂದು ಕಂಡಿಶನ್ ಹಾಕಿದ್ದಾನೆ. ಗೊತ್ತಿಲ್ಲದ ಊರಲ್ಲಿ ಕಿರಿಕ್ ಯಾಕೆ ಅಂತ ಎಲ್ಲರೂ ಒಪ್ಪಿಕೊಂಡಿದ್ದಾರೆ.

ಟೆಂಪೋ ಟ್ರಾವೆಲ್ಲರ್ ನಲ್ಲಿ 8 ಜನ ಮಹಿಳೆಯರು, ಇಬ್ಬರು ಯುವಕರು ಮತ್ತಿಬ್ಬರು ಮಕ್ಕಳು ದೇವಾಲಯ ನೋಡಲು ಹೊರಟಿದ್ದೆವು. ದರ್ಶನ ಮುಗಿಸಿ ಬಂದರೂ ಚಾಲಕ ಮಾತ್ರ ಸರಿಯಾಗಿ ಗಾಡಿಯಲ್ಲಿ ಇರದೇ ಕರ್ನಾಟಕದ ಪ್ರವಾಸಿಗರನ್ನ ಕಾಯಿಸಿದ್ದಾನೆ. ಬನ್ನಿ ಸರ್ ಟೈಂ ಆಗುತ್ತೆ ಹೋಗೋಣ ಅಂತ ಕರೆದರೆ, 1 ಸಾವಿರ ಇಸ್ಪೀಟ್‍ ಗೆ ಕಟ್ಟಿದ್ದೇನೆ ಗೆಲ್ಲೋವರೆಗೂ ಬರಲ್ಲ ಅಂತ ಹೇಳಿದ್ದನು ಎಂದು ತೊಂದರೆಗೊಳಗಾದ ವೈಶಾಲಿ ಹೇಳಿದ್ದಾರೆ.

ತಾನು ಹೇಳಿದ ಕಡೆ ಊಟ ಮಾಡದಿದ್ದರೆ ನಿಮ್ಮ ಲಗೇಜ್‍ ನೆಲ್ಲ ಬೀಸಾಕುತ್ತೇನೆ ಎಂದು ಬ್ಯಾಗ್‍ಗಳನ್ನ ಬಿಸಾಕಲು ಮುಂದಾಗಿದ್ದನು. ಇಷ್ಟೇ ಅಲ್ಲದೇ ಮಾರ್ಗ ಮಧ್ಯೆ ರಾತ್ರಿ 10:30 ಸುಮಾರಿಗೆ ಗಾಡಿ ನಿಲ್ಲಿಸಿ ಹೋದ ಚಾಲಕ ತಡ ರಾತ್ರಿ 2 ಗಂಟೆಯಾದರೂ ಬಾರದೇ ಕನ್ನಡಿಗರು ಪರಡಾಡುವಂತೆ ಮಾಡಿದ್ದನು. ಕೊನೆಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೆವು. ಆಗ ಪೊಲೀಸರು ಡ್ರೈವರ್ ಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ ಎಂದು ಪ್ರವಾಸಿಗರು ತಿಳಿಸಿದ್ದಾರೆ.

ದೇವರ ದರ್ಶನಕ್ಕೆ ಎಂದು ಹೋದ ಸಿಲಿಕಾನ್ ಸಿಟಿ ಮಂದಿಗೆ ಮಹಾರಾಷ್ಟ್ರದ ಟಿಟಿ ಡ್ರೈವರ್ ದರ್ಪ ತೋರಿಸಿ ಅಯ್ಯೋ ಅನ್ನಿಸಿದ್ದಾನೆ. ಹೀಗಾಗಿ ಹೊರ ರಾಜ್ಯಗಳಿಗೆ ಟ್ರಿಪ್ ಹೋಗುವ ಮೊದಲು ಸರಿಯಾದ ಪ್ಲಾನ್ ಮಾಡಿಕೊಳ್ಳಿ, ಇಲ್ಲವಾದರೆ ಈ ರೀತಿಯಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *