ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರವೇ 10 ರೂ. ಮುಖ ಬೆಲೆಯ ಹೊಸ ವಿನ್ಯಾಸದ ನೋಟುಗಳನ್ನು ಬಿಡುಗಡೆಗೊಳಿಸಲಿದೆ ಎಂದು ಮಾಧ್ಯವೊಂದು ವರದಿ ಮಾಡಿದೆ.
ಮಾಧ್ಯಮ ವರದಿಯ ಪ್ರಕಾರ, ಕಳೆದ ವಾರ ಆರ್ ಬಿಐ ಕೇಂದ್ರ ಸರ್ಕಾರದಿಂದ ಹೊಸ 10 ರೂ ಮುಖ ಬೆಲೆಯ ನೋಟು ಮುದ್ರಣದ ವಿನ್ಯಾಸಕ್ಕೆ ಅನುಮತಿ ಪಡೆದಿದ್ದು, ಈಗಾಗಲೇ ಅಂದಾಜು 100 ಕೋಟಿ 10 ರೂ. ನೋಟುಗಳನ್ನು ಮುದ್ರಣ ಮಾಡಿದೆ ಎನ್ನಲಾಗಿದೆ.
Advertisement
Advertisement
ನೋಟಿನ ವಿಶೇಷತೆ ಏನು?
ಹತ್ತು ರೂ. ಹೊಸ ನೋಟಿನಲ್ಲಿ ಗಾಂಧಿ ಭಾವ ಚಿತ್ರ ಇರಲಿದ್ದು, ನೋಟಿನ ಹಿಂಭಾಗದಲ್ಲಿ ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯದ ಚಿತ್ರವಿರಲಿದೆ. ಅಲ್ಲದೇ ನೋಟು ಚಾಕೊಲೇಟ್ ಹಳದಿ ಬಣ್ಣವನ್ನು ಹೊಂದಿರಲಿದೆ.
Advertisement
2016ರ ನವೆಂಬರ್ 8 ರಂದು 1 ಸಾವಿರ ರೂ. ಹಾಗೂ 500 ರೂ. ನೋಟು ನಿಷೇಧದ ಬಳಿಕ ಆರ್ ಬಿಐ ಹೊಸ 500 ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. ನೋಟ್ ಬ್ಯಾನ್ ಬಳಿಕ ಸೃಷ್ಟಿಯಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಆಗಸ್ಟ್ ತಿಂಗಳಿನಲ್ಲಿ ಆರ್ ಬಿಐ ಹೊಸ 200 ರೂ. ಹಾಗೂ 50 ರೂ. ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. 200 ರೂ. ಮುಖ ಬೆಲೆ ನೋಟಿನಲ್ಲಿ ಭಾರತದ ಸಂಸ್ಕೃತಿ ಪರಂಪರೆ ತಿಳಿಸುವ ಸಲುವಾಗಿ ಸಾಂಚಿ ಸೂಪ್ತವನ್ನು ಮುದ್ರಿಸಿದ್ದರೆ, 50 ರೂ. ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿತ್ತು.
Advertisement
ಈ ಹಿಂದೆ 2005ರಲ್ಲಿ 10 ರೂ. ಮುಖ ಬೆಲೆಯ ಹೊಸ ನೋಟುಗಳನ್ನು ಆರ್ ಬಿಐ ಬಿಡುಗಡೆ ಮಾಡಿತ್ತು.