
ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಎರಡನೇ ದಿನ ಬ್ಯಾಟಿಂಗ್ ಮಾಡುತ್ತಿದ್ದ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಅಜಾಜ್ ಪಟೇಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡಾದರೂ ಕೂಡ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್ಎಸ್) ಮೊರೆ ಹೋಗಿ ಪೇಚಿಗೆ ಸಿಲುಕಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಟ್ರೋಲ್ ಆಗುತ್ತಿದ್ದಾರೆ.
ಕ್ರಿಕೆಟ್ನಲ್ಲಿ ಆನ್ಫೀಲ್ಡ್ ಅಂಪೈರ್ ಅನುಮಾನದ ತೀರ್ಪು ನೀಡಿದಾಗ ಆಟಗಾರರು ಡಿಆರ್ಎಸ್ ಮೊರೆ ಹೋಗಲು ಅವಕಾಶವಿದೆ. ಬಳಿಕ ಆನ್ಫೀಲ್ಡ್ ಅಂಪೈರ್ ತಮ್ಮ ತೀರ್ಪನ್ನು ಬದಲಾಯಿಸಿಕೊಳ್ಳುವ ಅವಕಾಶವು ಇದೆ. ಹಾಗಾಗಿ ಆಟಗಾರರು ಡಿಆರ್ಎಸ್ ಕೇಳುವುದು ಸರ್ವೇಸಾಮಾನ್ಯ. ಆದರೆ ಬೌಲ್ಡ್ ಆಗಿ ಡಿಆರ್ಎಸ್ ಕೇಳಿದ ನಿದರ್ಶನಗಳಿರಲಿಲ್ಲ. ಇದೀಗ ಅದು ಕೂಡ ನಡೆದಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅಶ್ವಿನ್ ಬ್ಯಾಟಿಂಗ್ ಬಂದಿದ್ದರು. ಅವರು ಎದುರಿಸಿದ ಮೊದಲ ಎಸೆತದಲ್ಲೇ ಬೌಲ್ಡ್ ಆದರೂ ಆದರೆ ಇದನ್ನು ಗಮನಿಸದ ಅಶ್ವಿನ್ ತಮ್ಮ ಬ್ಯಾಟ್ಗೆ ತಾಗದೆ ಕೀಪರ್ಗೆ ಕ್ಯಾಚ್ ಆಗಿದೆ ಅಂದುಕೊಂಡು ಅಂಪೈರ್ ಔಟ್ ತೀರ್ಪು ನೀಡಿದ್ದಾರೆಂದು ಡಿಆರ್ಎಸ್ ಮೊರೆ ಹೋದರು. ಆ ಬಳಿಕ ಎಚ್ಚೆತ್ತುಕೊಂಡ ಅಶ್ವಿನ್ ಬೌಲ್ಡ್ ಆಗಿರುವುದನ್ನು ಗಮನಿಸಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ: 10 ವಿಕೆಟ್ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್ ಪಟೇಲ್
Ashwin makes history by taking a review after getting clean bowled…. pic.twitter.com/drtG5JPJAE
— Katherine (@jawairiasyed) December 4, 2021
ಇದೀಗ ಅಶ್ವಿನ್ ಅವರ ರಿವ್ಯೂ ವೀಡಿಯೋ ವೈರಲ್ ಆಗುತ್ತಿದ್ದು, ಬೌಲ್ಡ್ ಆದರೂ ಡಿಆರ್ಎಸ್ ತೆಗೆದುಕೊಂಡ ಅಶ್ವಿನ್ ಲೆಜೆಂಡ್ ಆಟಗಾರ ಹಾಗಾಗಿ ಡಿಆರ್ಎಸ್ ತೆಗೆದುಕೊಂಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿವಿಧ ಕಾಮೆಂಟ್ ಮೂಲಕ ಅಶ್ವಿನ್ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ: ಆರ್ಸಿಬಿ ಪರ ಮಾತ್ರ ಆಡುತ್ತೇನೆ ಎಂದಿದ್ದ ಚಹಲ್ ಐಪಿಎಲ್ ಭವಿಷ್ಯವೇನು?