Bengaluru CityKarnatakaLatest

ಶನಿ ಮುಖಿ ಕೊಲೆಗೆ ಸುಪಾರಿ ಒಂದು ಕೇಡು – ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್

ಬೆಂಗಳೂರು: ರವಿ ಬೆಳಗೆರೆ ಪರಪ್ಪನ ಅಗ್ರಹಾರಲ್ಲಿ ಕುಳಿತುಕೊಂಡು ಸುನಿಲ್ ಹೆಗ್ಗರವಳ್ಳಿ ವಿರುದ್ಧ ಕಿಡಿಕಾರಿದ ಬರಹ ಈ ವಾರದ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗಿದೆ.

“ಶನಿ ಮುಖಿ ಕೊಲೆಗೆ ಸುಪಾರಿ ಒಂದು ಕೇಡು!” ಎನ್ನುವ ಹೆಡ್‍ಲೈನ್ ಹಾಕಿ “ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್” ಎಂದು ಟ್ಯಾಗ್ ಲೈನ್ ಕೊಟ್ಟು ರವಿ ಬೆಳಗೆರೆ ಮುಖಪುಟದಲ್ಲೇ ಹೆಗ್ಗರವಳ್ಳಿ ವಿರುದ್ಧ ಬರಹ ಸಮರ ಆರಂಭಿಸಿದ್ದಾರೆ.

ಸಾಫ್ಟ್ ಕಾರ್ನರ್ ಮತ್ತು ಖಾಸ್ ಬಾತ್‍ನಲ್ಲಿ ಹೆಗ್ಗರವಳ್ಳಿ ವಿರುದ್ಧ ಆಕ್ರೋಶದ ಬರಹ ಬರೆದಿರುವ ಬೆಳಗೆರೆ, ಮುದ್ರಣಕ್ಕೆ ಕೊಂಚ ತಡವಾಗಿದೆ. ವಿವರವಾಗಿ ಮುಂದೆ ಬರೆಯುತ್ತೇನೆ ಎಂದು ಹೇಳಿದ್ದಾರೆ. ( ಇದನ್ನೂ ಓದಿ:  ರವಿ ಬೆಳಗೆರೆ ಹತ್ಯೆಗೂ ನಡೆದಿತ್ತಂತೆ ಸಂಚು – ಗನ್ ಹಿಂದಿನ ರಿಯಲ್ ಕಹಾನಿ )

ಸಾಫ್ಟ್ ಕಾರ್ನರ್ ನಲ್ಲಿ ಹೇಳಿದ್ದು ಏನು?
ಹಾಯ್ ಮೈ ರೀಡರ್ಸ್!
ಈಗ ತುಸು ಹೊತ್ತಿಗೆ ಬಂಧಮುಕ್ತನಾಗಿದ್ದೇನೆ. Nothing can stop me! ಇದು ಶುರುವಾದದ್ದು ಹೇಗೆ ಅಂತ ಹೇಳ್ತೀನಿ. ಒಬ್ಬ ಸುಪಾರಿ ಹಂತಕ. ಒಬ್ಬ ಪೊಲೀಸ್ ಅಧಿಕಾರಿ. ಹೀಗೆ ನಾಲ್ಕೈದು ಜನ ಸೇರಿ ನೇಯ್ದ ಅತ್ಯಂತ ಬಲಹೀನ ಜಾಲವಿದು. ಆಫೀಸಿನಲ್ಲಿ ಆಗಷ್ಟೇ ಬರೆದು ನಿದ್ರೆಯಲ್ಲಿದೆ. ಪೊಲೀಸ್ ಅಧಿಕಾರಿಯೊಬ್ಬರು ಬಂದು ನಿಮ್ಮನ್ನ arrest ಮಾಡ್ತಿದೀನಿ ಅಂದರು. Fine, ಹಲ್ಲುಜ್ಜಿಕೊಂಡು ಬರ್ತೀನಿ. ನೀವು ಅಲ್ಲೀ ತನಕ ಕೂತಿರಿ ಅಂದೆ. ಒಂದು ಮೂಲೆ ಬಿಡದೆ search ಮಾಡಿದರು. ಸಿಗರೇಟಿನ ತುಂಡು ಬಿಟ್ಟು ಇನ್ನೇನು ಸಿಕ್ಕೀತು?

ಅಷ್ಟರಲ್ಲಿ ಸುನೀಲ್‍ನ chapter ಬಂತು. ಅವನು ಹದಿನೈದು ವರ್ಷದ ನಂತರ ಕೆಲಸ ಬಿಟ್ಟು ಅಲ್ಲಲ್ಲಿ ಪರದಾಡಿ ಮೊನ್ನೆಯಷ್ಟೆ ಮತ್ತೆ ಕೆಲಸಕ್ಕೆ ಬಂದಿದ್ದ. Cool. He was working. ಹದಿನೈದು ವರ್ಷದ ಜೊತೆಗಾರ. ( ಇದನ್ನೂ ಓದಿ: ನೀವು ಯಾರು..? ನಾನು ಯಾಕೆ ಇಲ್ಲಿದ್ದೇನೆ..? ಜೈಲು ಸಿಬ್ಬಂದಿಗೆ ರವಿ ಬೆಳಗೆರೆ ಪ್ರಶ್ನೆ )

But Shashi ಹೇಳಿದ್ದು? ಸುನೀಲ್ ಹತ್ಯೆಗೆ ನಾನು 30 ಲಕ್ಷ ರೂ. ಸುಪಾರಿ ಕೊಟ್ಟೆನಂತೆ. ಹದಿನೈದು ಸಾವಿರ advance ಕೊಟ್ಟೆನಂತೆ! what a stupid talk. “ರವಿ ಬೆಳಗೆರೆ ನನ್ನ ಕೊಲ್ಲಿಸ್ತಾರೆ. ಜೀವ ಭಯ ಇದೆ” ಅಂದನಂತೆ. ಇದಕ್ಕೆ ಎಲ್ಲಿಂದ ನಗಬೇಕು? ಹದಿನೈದು ವರ್ಷ ಜೊತೆಗೆ ದುಡಿದೋನ್ನ ಸುಪಾರಿ ಕೊಟ್ಟು ಕೊಲ್ಲಿಸಲಾ? ಆಯ್ತು, ಕಟಕಟೆ, ಆಸ್ಪತ್ರೆ, ಜೈಲು-ಈಗ ಮೇಲು!I am safe and cheerful. ನಿಮ್ಮ ಆಶೀಸ್ಸುಗಳೇ ಧೈರ್ಯ. ಕೊಂಚ ತಡವಾಗಿದೆ ಪ್ರಿಂಟಿಗೆ. ವಿವರ ಬರೀತೇನೆ; ಬರೆಯಲೇ ಬೇಕು ಕೂಡ. ಉಸಿರುಗಟ್ಟಿಸುವಷ್ಟು. I love you.

ಖಾಸ್ ಬಾತ್‍ನಲ್ಲಿ ಹೇಳಿದ್ದು ಏನು?
ನಾನು ಕ್ರೈಂ ಬರೆದಿದ್ದೇನೆ, ಟಿವಿಯಲ್ಲಿ ತೋರಿಸಿದ್ದೇನೆ. ವೈಯಕ್ತಿಕವಾಗಿ ಪಾತಕಿಗಳನ್ನು ನೋಡಿದ್ದೇನೆ. ಎಲ್ಲವೂ ತಿಳಿಸುವ ಕಾನೂನು ಅರಿತ್ತಿದ್ದೇನೆ. ಇಷ್ಟೆಲ್ಲ ಇರುವವನು ಹದಿನಾಲ್ಕು- ಹದಿನೈದು ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಹುಡುಗನನ್ನು ಕೊಂದು ಹಾಕಲು ಸುಪಾರಿ ಕೊಡುತ್ತೇನಾ? Am I a killer? ಸಿಟ್ಟು ಬಂದರೆ ಈ ಹುಡುಗರ ಮೇಲೆ ರೇಗುತ್ತೇನೆ. ತೀರ ನಿರುಪಯೋಗಿಗಳು, ಕೆಲಸಗಳ್ಳರು ಅಥವಾ ವಸೂಲಿ ವೀರರು ಅಂತ ಗೊತ್ತಾದರೆ ತಕ್ಷಣ ತಿರುಪತಿ ತಿಮ್ಮನಿಗೆ ಸಮರ್ಪಿಸಿ ಕೈ ತೊಳೆದುಕೊಂಡು ಬಿಡುತ್ತೇನೆ. ಇದು my type of functioning.

ಇರಲಿ, ನಾನು ಹೇಗೆ ಅಂತ ಎಲ್ಲರೂ ತಿಳಿದು ಕೊಂಡಿರಬೇಕು ಎಂಬ ಭ್ರಾಂತು ನನಗಿಲ್ಲ. ಮೊನ್ನೆ ಅರೆಸ್ಟ್ ಮಾಡಿದ ಸಿಸಿಬಿಯ ಅಧಿಕಾರಿ ಎಸಿಪಿ ಸುಬ್ರಮಣ್ಯರವರು ಅನೇಕ ವರ್ಷಗಳ ಹಿಂದೆ ತುಂಬಾ ನಟೋರಿಯಸ್ ಆದ ನಂದಗುಡಿ station ನಲ್ಲಿದ್ದರು. very honest and bold, `ನಂದ ಗುಡಿ’ ಅಂದ್ರೇನೆ ಅಪಾಯಕಾರಿ, ಅಲ್ಲಿ ಪಾತಕಿಗಳ ಸದ್ದಡಗಿಸಿದವರು. ಇಂತಹ ಅಧಿಕಾರಿ ಅನಾರೋಗ್ಯಗೊಂಡಿದ್ದ ನನ್ನನ್ನು ಅದ್ಹೇಂಗೆ handle ಮಾಡಿದರೋ? ಯಾಕೆಂದರೆ ನಾನು ವಿಪರೀತ ಸಿಗರೇಟಿನ ದಾಸ. ಬೇಕಾದರೆ ಒಂದ್ಹೊತ್ತು ಊಟವನ್ನಾದರೂ ಬಿಟ್ಟೇನು; ಸಿಗರೇಟು ಬಿಡಲಾರೆ. ನನಗೆ ಸಿಗರೇಟು ಕೊಟ್ಟು ಪಾಪ ಯಾರ್ಯಾರು ಬೈಸಿಕೊಂಡರೋ? ನಿನ್ನೆ ಮೈ ಅಲುಗಿಸಿ ಎಬ್ಬಿಸಿದಾಗ ಇದೆಲ್ಲ ನೆನಪಾದವು, ನಿಮ್ಮೊಂದಿಗೆ ಹಂಚಿಕೊಂಡೆ. I am bold, honest and upright.

Leave a Reply

Your email address will not be published.

Back to top button