ರತನ್ ಟಾಟಾ ಆತ್ಮಕಥೆ – 2 ಕೋಟಿ ರೂ.ಗೆ ಜಾಗತಿಕ ಹಕ್ಕು ಖರೀದಿ

Advertisements

ನವದೆಹಲಿ: ಭಾರತದ ಪ್ರಸಿದ್ಧ ಉದ್ಯಮಿ ರತನ್ ಟಾಟಾ ಅವರ ಆತ್ಮಕಥೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಆತ್ಮಕಥೆಯನ್ನು ಹಾರ್ಪರ್ ಕೋಲಿನ್ಸ್ ಸಂಸ್ಥೆ ಪ್ರಕಟಿಸಲಿದ್ದು, ಬರೋಬ್ಬರಿ 2 ಕೋಟಿ ರೂ.ಗೆ ಜಾಗತಿಕ ಹಕ್ಕನ್ನು ಖರೀದಿಸಿದೆ.

Advertisements

ರತನ್ ಎನ್. ಟಾಟಾ: ದಿ ಅಥರೈಸ್ಡ್ ಬಯೋಗ್ರಫಿ ಎಂಬ ಶೀರ್ಷಿಕೆಯ ಪುಸ್ತಕವನ್ನು ನಿವೃತ್ತ ಐಎಎಸ್ ಅಧಿಕಾರಿ ಥಾಮಸ್ ಮ್ಯಾಥ್ಯೂ ಬರೆಯಲಿದ್ದಾರೆ. ಈ ವರ್ಷ ನವೆಂಬರ್ ತಿಂಗಳಿನಲ್ಲಿ ಪುಸ್ತಕ ಬಿಡುಗಡೆಯಾಗಲಿದೆ ಎಂದು ಬ್ರಿಟಿಷ್ ಪಬ್ಲಿಷಿಂಗ್ ಹೌಸ್ ತಿಳಿಸಿದೆ.

Advertisements

ಲೇಖಕ ಥಾಮಸ್ ಮ್ಯಾಥ್ಯೂ ಅವರಿಗೆ ರಥನ್ ಟಾಟಾ ಅವರು ಈ ಮೊದಲೇ ತಮ್ಮ ಆತ್ಮಕಥೆಯನ್ನು ಬರೆಯಲು ಅನುಮತಿ ನೀಡಿದ್ದರು. ಹೀಗಾಗಿ ಟಾಟಾ ಅವರ ಜೀವನದ ಹಲವು ಮಾಹಿತಿಗಳನ್ನು ಥಾಮಸ್‌ಗೆ ನೀಡಿದ್ದು, ಈಗಾಗಲೇ ಮ್ಯಾಥ್ಯೂ ಕಥೆಯನ್ನು ಬರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೂಸ್ಟರ್ ಡೋಸ್ – ಯಾರು ಪಡೆಯಬಹುದು? ಅರ್ಹತೆ ಏನು?

ಆತ್ಮಕಥೆಯಲ್ಲಿ ಏನೇನು ಇರಲಿದೆ?
84 ವರ್ಷ ವಯಸ್ಸಿನ ಟಾಟಾ ಅವರ ಬಾಲ್ಯ, ಕಾಲೇಜು ಜೀವನದ ಕಥೆಗಳೊಂದಿಗೆ, ಮುಖ್ಯ ಘಟನೆಗಳಾದ ಟಾಟಾದ ನ್ಯಾನೋ ಯೋಜನೆ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಪದಚ್ಯುತಿಗೊಳಿಸಿದ ಘಟನೆ, ಹಾಗೂ ಟಾಟಾ ಸ್ಟೀಲ್ ಲಿಮಿಟೆಡ್‌ನ ಕೋರಸ್‌ಅನ್ನು ಸ್ವಾಧೀನಗೊಳಿಸಿದ ಘಟನೆಯ ಬಗೆಗಿನ ವಿವರವಾದ ಮಾಹಿತಿಯನ್ನು ಆತ್ಮಕಥೆಯಲ್ಲಿ ನೋಡಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!

Advertisements

ಪುಸ್ತಕವನ್ನು ಇಂಗ್ಲಿಷ್ ಹಾಗೂ ಭಾರತದ ಪ್ರಮುಖ ಭಾಷೆಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಹಾರ್ಪರ್ ಕೋಲಿನ್ಸ್ ಸಂಸ್ಥೆ ತಿಳಿಸಿದೆ.

Advertisements
Exit mobile version