Sunday, 24th March 2019

Recent News

ಕೊಲ್ಲಲು ಬಂದ ಬೆಕ್ಕನ್ನ ಅಟ್ಟಾಡಿಸಿದ ಇಲಿ-ವಿಡಿಯೋ ನೋಡಿ

ಲುಕ್ಸೆಂಬರ್ಗ್: ಬೆಕ್ಕು-ಇಲಿ ಎರಡೂ ಪ್ರಾಣಿಗಳು ಬದ್ಧವೈರಿಗಳು ಅಂತಾ ಎಲ್ಲರಿಗೂ ಗೊತ್ತು. ಈ ಎರಡು ಪ್ರಾಣಿಗಳಲ್ಲಿ ಬೆಕ್ಕು ಬಲಿಷ್ಠ ಅಂತಾ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದ್ರೆ ಲಕ್ಸೆಂಬರ್ಗ್ ನಲ್ಲಿ ಇಲಿಯೊಂದು ತನ್ನನ್ನು ಕೊಲ್ಲಲು ಬಂದ ಬೆಕ್ಕನ್ನು ಅಟ್ಟಾಡಿಸಿ ಓಡಿಸಿಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಲುಕ್ಸೆಂಬರ್ಗ್ ನಗರದ ಎಸ್ಕ್-ಸುರ್-ಅಲ್ಜೆಟ್ಟೆ ಎಂಬಲ್ಲಿ ಈ ಘಟನೆ ನಡೆದಿದ್ದು, ಇಲಿ ಮತ್ತು ಬೆಕ್ಕಿನ ಕಾದಾಟದ ದೃಶ್ಯಗಳನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ನವೆಂಬರ್ 5ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ..?
ಕಟ್ಟಡದ ಕಿಟಕಿಯಿಂದ ಹೊರ ಬಂದ ಬೆಕ್ಕು ರಸ್ತೆಯನ್ನು ದಾಟುತ್ತಿತ್ತು. ರಸ್ತೆಯ ಮತ್ತೊಂದು ಬದಿಯಲ್ಲಿ ಇಲಿ ಇರೋದನ್ನು ಕಂಡ ಬೆಕ್ಕು ಭರ್ಜರಿ ಬೇಟೆ ಸಿಕ್ಕಿತೆಂದು ಅದರತ್ತ ಓಡಿಹೋಗಿದೆ. ಬೆಕ್ಕನ್ನು ನೋಡಿ ಸ್ವಲ್ಪವೂ ವಿಚಲಿತಗೊಳ್ಳದ ಇಲಿ ಅದರೊಡನೆ ಕಾದಾಟಕ್ಕೆ ಇಳಿದಿದೆ. ಇಲಿಯ ಧೈರ್ಯವನ್ನು ನೋಡಿ ಭಯಗೊಂಡ ಬೆಕ್ಕು ಅಲ್ಲಿಂದ ನಿಧಾನಕ್ಕೆ ಕಾಲ್ಕಿತ್ತಿದೆ.

ಬೆಕ್ಕು ತನ್ನ ಬಾಲ ಮುದುರಿಕೊಂಡು ಹೋಗುತ್ತಿದ್ದರೂ ಇಲಿ ವೀರಾವೇಷದಿಂದ ಅದರ ಹಿಂದೆ ಹೋಗಿದೆ. ಇಲಿಯನ್ನು ಕಂಡ ಬೆಕ್ಕು ಮತ್ತೆ ಹೋರಾಟಕ್ಕೆ ಇಳಿದ್ರೂ ಪ್ರಯೋಜನವಾಗಿಲ್ಲ. ಕೊನೆಗೆ ಇದರೊಂದಿಗಿನ ಹೋರಾಟ ವ್ಯರ್ಥ ಎಂದು ಅರಿತ ಬೆಕ್ಕು ಪಲಾಯನ ಮಾಡಿದೆ.

ನಾನು ರಸ್ತೆ ಮಾರ್ಗವಾಗಿ ತೆರಳುತ್ತಿರುವಾಗ ಬೆಕ್ಕು ರಸ್ತೆ ದಾಟುವುದನ್ನು ಕಂಡೆ. ಅದು ನೇರವಾಗಿ ಇಲಿಯ ಬಳಿ ತೆರಳುತ್ತಿದ್ದಂತೆ ನಾನು ವಿಡಿಯೋ ಮಾಡಲು ಪ್ರಾರಂಭಿಸಿದೆ. ಇಲಿ ಮತ್ತು ಬೆಕ್ಕಿನ ಕಾದಾಟ ನಿಜಕ್ಕೂ ರೋಚಕವಾಗಿತ್ತು ಎಂದು ವಿಡಿಯೋ ಚಿತ್ರೀಕರಿಸಿದ ಯುವಕ ಹೇಳಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *