Thursday, 18th July 2019

ಆಯೋಧ್ಯೆಯಲ್ಲಿ RMMನಿಂದ ಬೃಹತ್ ಸಾಮೂಹಿಕ ನಮಾಜ್, ಕುರಾನ್ ಪಠಣೆ ಆಯೋಜನೆ

ಕ್ನೋ: ಅಯೋಧ್ಯ ನಗರದ ಸರಾಯು ನದಿ ತೀರದಲ್ಲಿ ಮೊದಲ ಬಾರಿಗೆ ಬೃಹತ್ ನಮಾಜ್ ಮತ್ತು ಕುರಾನ್ ಪಠನೆಯನ್ನು ಆಯೋಜನೆ ಮಾಡಲಾಗಿದೆ.

ಜುಲೈ 12ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಅಂಗಸಂಸ್ಥೆಯಾದ ರಾಷ್ಟ್ರೀಯ ಮುಸ್ಲಿಮ್ ಮಂಚ್‍ನಿಂದ ಜುಲೈ 12ರಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಅಂದಾಜು 1,500 ಉಲೇಮಾ (ಮುಸ್ಲಿಮ್ ಧರ್ಮಗುರುಗಳು) ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಸುಮಾರು 1,500 ಸೇರಿದಂತೆ ಹಲವು ಧರ್ಮ ಬೋಧಕರು ಬೃಹತ್ ನಮಾಜ್ ನಲ್ಲಿ ಭಾಗಿಯಾಗಲಿದ್ದಾರೆ. ಸರಾಯು ನದಿಯಲ್ಲಿಯೇ ಕೈಕಾಲು ತೊಳೆದುಕೊಂಡು ದಡದಲ್ಲಿಯೇ ಸಾಮೂಹಿಕ ನಮಾಜ್ ಮಾಡಲಿದ್ದಾರೆ.

ನಮಾಜ್ ನಂತರ ಕುರಾನ್ ಪಠಣ ಮಾಡಲಾಗುತ್ತದೆ. ಈ ಕಾರ್ಯಕ್ರಮ ಮೂಲಕ ಶಾಂತಿ ಮತ್ತು ಸಹೋದರತ್ವವನ್ನು ಸಂದೇಶವನ್ನು ಜಗತ್ತಿಗೆ ನೀಡಲಿದ್ದೇವೆ. ಈ ನಮ್ಮ ಸಾಮೂಹಿಕ ಪ್ರಾರ್ಥನೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ನೆರವಾಗುತ್ತದೆ ಎಂದು ನಂಬಿದ್ದೇವೆ ಎಂದು ರಾಷ್ಟ್ರೀಯ ಮುಸ್ಲಿಮ್ ಮಂಚ್ ನ ಸಂಯೋಜಕ ರಾಜಾ ರಿಝ್ವಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಈ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮುಸ್ಲಿಮ್ ಮಂಚ್, ನಾಯಕಿ ಶಬಾನಾ ಅಜ್ಮಿ, ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಧರ್ಮದ ಕುರಿತು ಅಭ್ಯಸಿಸಲು ಬಿಡೋದಿಲ್ಲ ಎಂಬ ಭಾವನೆ ಇದೆ. ಆರ್‍ಎಸ್‍ಎಸ್ ಮುಸ್ಲಿಮರ ವಿರುದ್ಧವೇ ಕೆಲಸ ಮಾಡುತ್ತದೆ ಎಂಬ ಕಲ್ಪನೆಯನ್ನು ನಿರ್ಮೂಲನೆ ಮಾಡಲು ಬೃಹತ್ ನಮಾಜ್ ಆಯೋಜಿಸಲಾಗಿದೆ. ಇದರ ಮೂಲಕ ಅಯೋಧ್ಯೆಯಲ್ಲಿಯೂ ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿದ್ದು, ಆರ್‍ಎಸ್‍ಎಸ್ ಮುಸ್ಲಿಮರಿಗೆ ಗೆಳೆಯ ಎಂಬ ಸಂದೇಶ ಸಾರಲಾಗುವುದು. ಮುಸ್ಲಿಮರು ಹಾಗು ಹಿಂದೂಗಳು ಒಂದೇ ಡಿಎನ್‍ಎ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಈ ಬೃಹತ್ ಕಾರ್ಯಕ್ರಮಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಸಹ ಬೆಂಬಲ ನೀಡಿದ್ದಾರೆ. ಜುಲೈ 12ರಂದು ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಸಚಿವ ಲಕ್ಷ್ಮೀ ನಾರಾಯಣ್ ಮತ್ತು ಆರ್‍ಎಸ್‍ಎಸ್ ಮುಖಂಡ ಮುರಾರಿ ದಾಸ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.

ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರುವುದರ ಜೊತೆಗೆ ಆರ್‍ಎಸ್‍ಎಸ್ ಮುಸ್ಲಿಮ್ ವಿರೋಧಿ ಎಂಬ ಹಣೆಪಟ್ಟೆಯಿಂದ ಹೊರ ಬರಲು ಈ ಕಾರ್ಯಕ್ರಮವನ್ನು ಆಯೋಜಿಸಿದೆ.

Leave a Reply

Your email address will not be published. Required fields are marked *