Saturday, 24th August 2019

ಕಾಲಿವುಡ್ ನಂತ್ರ ಬಾಲಿವುಡ್‍ಗೆ ರಶ್ಮಿಕಾ ಮಂದಣ್ಣ ಎಂಟ್ರಿ

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕಾಲಿವುಡ್ ನಂತರ ಬಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ರಶ್ಮಿಕಾ ಇನ್ನು ಹೆಸರಿಡದ ಚಿತ್ರದಲ್ಲಿ ನಟ ರಣದೀಪ್ ಹೂಡಾಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಈ ಚಿತ್ರದ ಬಗ್ಗೆ ರಾಶ್ಮಿಕಾ ಮಂದಣ್ಣ ಚಿತ್ರತಂಡದ ಜೊತೆ ಇನ್ನೂ ಮಾತುಕತೆ ನಡೆಸುತ್ತಿದ್ದಾರೆ. ರಶ್ಮಿಕಾ ಅವರಿಗೆ ಈ ಚಿತ್ರದ ಸ್ಕ್ರಿಪ್ಟ್ ಇಷ್ಟವಾಗಿದ್ದು, ಚಿತ್ರದಲ್ಲಿ ನಟಿಸಲು ಅವರು ಗ್ರೀನ್ ಸಿಗ್ನಲ್ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ಚಿತ್ರದಲ್ಲಿ ನಟ ರಣದೀಪ್ ಹೂಡಾ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್‍ಗಳಿದ್ದು, ನಿರ್ದೇಶಕ ಬಲ್ವಿಂದರ್ ಸಿಂಗ್ ಸಾಕಷ್ಟು ಸಮಯದಿಂದ ಈ ಚಿತ್ರದ ಸ್ಕ್ರೀಪ್ಟ್ ಬರೆದಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಬಳಿಕ ‘ಚಲೋ’ ಚಿತ್ರ ಮೂಲಕ ಟಾಲಿವುಡ್‍ಗೆ ಪಾದಾರ್ಪಣೆ ಮಾಡಿ ಸಾಲು ಸಾಲು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಈಗ ಅವರ ಕಾಲಿವುಡ್‍ಗೂ ಕಾಲಿಟ್ಟಿದ್ದು, ನಟ ಕಾರ್ತಿ ಜೊತೆ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *