Connect with us

Bengaluru City

ಕೊನೆಗೂ ಕಿರಿಕ್ ಪಾರ್ಟಿಯ ಬೆಡಗಿಯ ಮೇಲೆ ರಾಜಮೌಳಿಯ ಕಣ್ಣು ಬಿತ್ತು!

Published

on

ಬೆಂಗಳೂರು: ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣಗೆ ಕನ್ನಡಕ್ಕಿಂತ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

ಕನ್ನಡದಲ್ಲಿ ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ತೆಲುಗಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಾಗಶೌರ್ಯ ಅಭಿನಯದ ಚಲೋ ಚಿತ್ರದಲ್ಲಿ ನಟಿಸಿದ್ದ ರಶ್ಮಿಕಾ ಮೊದಲ ನೋಟದಲ್ಲೇ ತೆಲುಗು ಅಭಿಮಾನಿಗಳನ್ನು ಕೂಡ ಬೌಲ್ಡ್ ಮಾಡಿದ್ದರು. ಈಗ ಮತ್ತಷ್ಟು ತೆಲುಗು ಸಿನಿಮಾಗಳು ಕನ್ನಡದ ಹುಡುಗಿಯ ಪಾಲಾಗುತ್ತಿದೆ.

ಬಾಹುಬಲಿ ನಿರ್ದೇಶಕ ಎಸ್.ಎಸ್ ರಾಜಮೌಳಿಯ ಕಣ್ಣು ಈಗ ರಶ್ಮಿಕಾ ಮಂದಣ್ಣ ಅವರ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಚಿತ್ರದ ನಂತರ ಮೆಗಾ ಸಿನಿಮಾ ಕೈಗೆತ್ತಿಕೊಂಡಿರುವ ರಾಜಮೌಳಿ ತೆಲುಗಿನ ಇಬ್ಬರು ಸೂಪರ್ ಸ್ಟಾರ್ ನಟರ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ.

ರಾಜಮೌಳಿ ಆಕ್ಷನ್ ಕಟ್ ಹೇಳಲಿರುವ ‘RRR’ ಪ್ರಾಜೆಕ್ಟ್ ಗೆ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆ ಇದೆ. ರಾಮ್ ಚರಣ್ ತೇಜ್ ಮತ್ತು ಜೂನಿಯರ್ ಎನ್.ಟಿ.ಆರ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇಬ್ಬರಲ್ಲಿ ಒಬ್ಬರಿಗೆ ಜೋಡಿಯಾಗಬಹುದು ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದೆ.

ಸದ್ಯದ ಮಾಹಿತಿ ಪ್ರಕಾರ ರಾಜಮೌಳಿಯ ಈ ದೊಡ್ಡ ಪ್ರಾಜೆಕ್ಟ್ ಗೆ ತೆಲುಗಿನ ನಟಿ ರಾಶಿ ಖನ್ನಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ತೆಲುಗಿನ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿರುವ ರಾಶಿ, ರಾಜಮೌಳಿ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

‘RRR’ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರಿದ್ದು, ಇಬ್ಬರು ನಾಯಕಿಯರು ಇರುವುದು ಖಚಿತ. ಹೀಗಾಗಿ ಆ ಇಬ್ಬರಿಗೆ ಸೂಕ್ತವಾದ ನಟಿಯರ ಅವಶ್ಯಕತೆ ಇದೆ. ಈಗಾಗಲೇ ರಾಶಿ ಖನ್ನಾ ಜೊತೆ ರಕುಲ್ ಪ್ರೀತ್ ಸಿಂಗ್ ಮತ್ತು ಸಮಂತಾ ಅಕ್ಕಿನೇನಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಕೂಡ ಒಬ್ಬ ನಾಯಕಿಯಾಗುವ ಸಾಧ್ಯತೆ ಇದೆ ಎಂದು ಈ ಸುದ್ದಿ ಕೇಳಿ ಬರುತ್ತಿದೆ.

‘ಚಲೋ’ ಚಿತ್ರದಲ್ಲಿ ಮೋಡಿ ಮಾಡಿದ್ದ ರಶ್ಮಿಕಾ ಮಂದಣ್ಣ ಈಗ ನಾನಿ ವಿಜಯ ದೇವರಕೊಂಡ ಅಭಿನಯದ ಚಿತ್ರದಲ್ಲೂ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ.

ಈಗಾಗಲೇ RRR ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ಮುಗಿಸಿರುವ ರಾಜಮೌಳಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು. ಮತ್ತೊಂದೆಡೆ ರಾಮ್ ಚರಣ್ ‘ರಂಗಸ್ಥಲಂ’ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ಎನ್.ಟಿ.ಆರ್ ತ್ರಿವಿಕ್ರಮ ಶ್ರೀನಿವಾಸ್ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಬಹುಶಃ ಈ ವರ್ಷವೇ ಸೆಟ್ಟೇರಲಿದ್ದು, ಮುಂದಿನ ವರ್ಷ ಈ ಚಿತ್ರ ತೆರೆಕಾಣಬಹುದು.